ಸನ್ಮಾರ್ಗ ವಾರ್ತೆ
ಹಜ್ ಯಾತ್ರಾರ್ಥಿಗಳಾಗಿ ಆಯ್ಕೆಯಾಗಿರುವವರಿಗೆ ಮೊದಲ ಕಂತನ್ನು ಕಟ್ಟುವುದಕ್ಕೆ ನಿಗದಿಪಡಿಸಲಾದ ದಿನಾಂಕವನ್ನು ವಿಸ್ತರಿಸಲಾಗಿದೆ. ಆಗಸ್ಟ್ 17ರ ವರೆಗೆ ಮೊದಲ ಕಂತಿನ ಹಣವನ್ನು ಪಾವತಿಸುವುದಕ್ಕೆ ಅವಕಾಶವನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಹಜ್ ಸಮಿತಿ ಹೇಳಿದೆ.
ಈ ಮೊದಲು ಆಗಸ್ಟ್ ಹತ್ತನ್ನು ಅಂತಿಮ ದಿನಾಂಕ ವೆಂದು ಹೇಳಲಾಗಿತ್ತು. ಆದರೆ ಆಗಸ್ಟ್ ಹತ್ತರ ನಡುವೆ ಎರಡನೇ ಶನಿವಾರ ಮತ್ತು ಆದಿತ್ಯವಾರ ಬಂದು ಬೆನ್ನು ಬೆನ್ನಿಗೆ ರಜಾ ದಿನಗಳು ಸಿಕ್ಕಿರುವುದರಿಂದ ಹಣ ಪಾವತಿಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ರಜೆಯಿಂದಾಗಿ ಹಣ ಪಾವತಿಗೆ ಕಷ್ಟಕರವಾಗಿದೆ ಎಂಬ ಆಕ್ಷೇಪವನ್ನು ಪರಿಗಣಿಸಿ ಇದೀಗ ದಿನಾಂಕವನ್ನು ವಿಸ್ತರಿಸಲಾಗಿದೆ ತಿಳಿದು ಬಂದಿದೆ. ಈ ಬಗ್ಗೆ ದಿನಾಂಕ ವಿಸ್ತರಿಸುವಂತೆ ಕೇರಳ ಸಚಿವ ಸಂಶುದ್ದೀನ್ ಅವರು ಕೇಂದ್ರ ಸಚಿವ ಕಿರಣ್ ರಿಜಿಜು ಅವರೊಂದಿಗೆ ವಿನಂತಿಸಿದ್ದರು.
ಇದೀಗ ಅವರ ವಿನಂತಿಯನ್ನು ಪುರಸ್ಕರಿಸಲಾಗಿದೆ. ದಿನಾಂಕವನ್ನು ವಿಸ್ತರಿಸಲಾಗಿದೆ.












