ಏಪ್ರಿಲ್ 29ರಿಂದ ಹಜ್ ಯಾತ್ರೆ ಆರಂಭ

0
505

ಸನ್ಮಾರ್ಗ ವಾರ್ತೆ

ಹಜ್ ಗಾಗಿ ಸೌದಿ ಅರೇಬಿಯಾ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆ. ದುಲ್ ಕಅದ್ ಅಥವಾ ಏಪ್ರಿಲ್ 29 ರಿಂದ ಈ ವರ್ಷದ ಹಜ್ ಗಾಗಿ ಯಾತ್ರಿಕರು ಸೌದಿಗೆ ಆಗಮಿಸಲಿದ್ದಾರೆ. ಮದೀನಾದ ಮೂಲಕ ಈ ಬಾರಿ ಭಾರತೀಯ ಹಜ್ ಯಾತ್ರಿಕರ ಮೊದಲ ತಂಡ ಆಗಮಿಸಲಿದೆ.

ಇವರು ಎಂಟು ದಿನಗಳ ಕಾಲ ಮಸ್ಜಿದುನ್ನಬವಿಯಲ್ಲಿ ಇದ್ದು ಆ ಬಳಿಕ ಮಕ್ಕಕ್ಕೆ ಬರುತ್ತಾರೆ. ಜೂನ್ ನಾಲ್ಕರಿಂದ ಜೂನ್ 9ರವರೆಗೆ ಈ ಬಾರಿಯ ಹಜ್ ಕರ್ಮ ನೆರವೇರಲಿದೆ. 1,75,000 ಕ್ಕಿಂತ ಅಧಿಕ ಮಂದಿ ಈ ಬಾರಿ ಹಜ್ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇವರಲ್ಲಿ 30 ಶೇಕಡ ಮಂದಿ ವಿವಿಧ ಖಾಸಗಿ ಗ್ರೂಪ್ ಗಳ ಮೂಲಕ ಹಜ್ ನಿರ್ವಹಿಸಲಿದ್ದಾರೆ. ಹಜ್ ಕಮಿಟಿ ಮೂಲಕ ಹಜ್ ನಿರ್ವಹಣೆಗೆ ಬರುವವರಿಗೆ ಮಕ್ಕ ಮತ್ತು ಮದೀನದಲ್ಲಿ ಬೇಕಾದ ಸೌಲಭ್ಯಗಳನ್ನು ಈಗಾಗಲೇ ಸಿದ್ಧಗೊಳಿಸಲಾಗಿದೆ.