ಟ್ರಂಪ್ ಜನಾಂಗೀಯವಾದಿ: ಅಮೆರಿಕದ ಮತದಾರರಲ್ಲಿ ಅರ್ಧಾಂಶಕ್ಕೂ ಹೆಚ್ಚು ಮಂದಿಯ ಅಭಿಪ್ರಾಯ

0
392

ವಾಷಿಂಗ್ಟನ್, ಜು. 31: ಅಮೆರಿಕದ ಮತದಾರರಲ್ಲಿ ಅರ್ಧಾಂಶಕ್ಕಿಂತಲೂ ಹೆಚ್ಚು ಮಂದಿ ಟ್ರಂಪ್‍ರನ್ನು ಜನಾಂಗೀಯವಾದಿ ಎಂದು ಕರೆಯುತ್ತಿದ್ದಾರೆ. ಇತ್ತೀಚೆಗೆ ನಡೆಸಲಾದ ಸಮೀಕ್ಷೆಯಲ್ಲಿ ಶೇ.51ರಷ್ಟು ಮಂದಿ ಟ್ರಂಪ್‍ರನ್ನು ಜನಾಂಗೀಯವಾದಿ ಎಂದಿದ್ದಾರೆ. ಮಂಗಳವಾರ ಕ್ವಿಂಪಿಯಾಕ್ ವಿಶ್ವವಿದ್ಯಾನಿಲಯ ಬಿಡುಗಡೆಗೊಳಿಸಿದ ಸಮೀಕ್ಷೆಯ ಆಧಾರದಲ್ಲಿ ಅನಾಡೊಲು ಸುದ್ದಿ ಸಂಸ್ಥೆ ವರದಿ ಮಾಡಿದೆ. ಧರ್ಮದಲ್ಲಿಯೂ ಅವರು ದೊಡ್ಡ ವಿಭಜನೆಯನ್ನು ಕಾಣುತ್ತಿದ್ದಾರೆ.

ಬಿಳಿಯರಾದ ಇವಾಂಜಲಿಸ್ಟ್ ಧರ್ಮ ವಿಶ್ವಾಸಿಗಳಲ್ಲಿ ಶೇ. 21ರಷ್ಟು ಮಂದಿ ಮಾತ್ರ ಟ್ರಂಪ್‍ರನ್ನು ವಂಶೀಯವಾದಿ ಎನ್ನುತ್ತಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 63ರಷ್ಟು ಮಂದಿ ಯಾವುದೇ ಧರ್ಮದೊಂದಿಗೆ ಸಂಬಂಧ ಇರುವವರಲ್ಲ. ಟ್ರಂಪ್‍ರ ವಲಸೆ ನೀತಿಯು ದೇಶದ ಸುರಕ್ಷೆ ಮತ್ತು ಗಡಿ ನಿಯಂತ್ರಣಕ್ಕಾಗಿದೆ ಎಂದು ಶೇ. 49 ರಷ್ಟು ಮಂದಿ ನಂಬಿಕೆ ಹೊಂದಿದ್ದಾರೆ. ಆದರೆ ವಲಸೆ ನೀತಿ ಅವರ ಜನಾಂಗೀಯವಾದದ ಭಾಗವಾಗಿದೆ ಎಂದು ಶೇ. 41ರಷ್ಟು ಮಂದಿ ಹೇಳುತ್ತಾರೆ. ಜುಲೈ 25 ಮತ್ತು 28ರ ನಡುವೆ ಸಮೀಕ್ಷೆ ನಡೆಸಲಾಗಿದ್ದು ದೇಶದ 1306 ಮತದಾರರು ಭಾಗವಹಿಸಿದ್ದರು.