ಹಮಾಸ್ ನಾಯಕ ಇಸ್ಮಾಯಿಲ್ ಹನಿಯ ಸಹೋದರಿ ಸಹಿತ ಕುಟುಂಬದ ಹಲವರು ಇಸ್ರೇಲ್ ದಾಳಿಗೆ ಬಲಿ

0
232

ಸನ್ಮಾರ್ಗ ವಾರ್ತೆ

ಹಮಾಸ್ ನಾಯಕ ಇಸ್ಮಾಯಿಲ್ ಹನಿಯ ಅವರ ಸಹೋದರಿ ಸಹಿತ ಕುಟುಂಬದ ಹಲವರು ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಅಲ್ಶಾತಿ ನಿರಾಶ್ರಿತ ಕ್ಯಾಂಪ್ ನ ಮನೆಯ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಹನಿಯ ಅವರ ಕುಟುಂಬದ 10 ಮಂದಿ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಏಪ್ರಿಲ್ 10 ರಂದು ಹನಿಯ ಅವರ ಮೂವರು ಮಕ್ಕಳು ಮತ್ತು ನಾಲ್ಕು ಮಂದಿ ಮೊಮ್ಮಕ್ಕಳನ್ನು ಇಸ್ರೇಲ್ ಹತ್ಯೆ ಮಾಡಿತ್ತು. ನಿರಾಶ್ರಿತ ಶಿಬಿರದ ಸಂದರ್ಶನಕ್ಕೆ ಬಂದಿದ್ದ ಹನಿಯ ಅವರ ಕುಟುಂಬವನ್ನು ಇಸ್ರೇಲ್ ಟಾರ್ಗೆಟ್ ಮಾಡಿದೆ. ಈ ಕುಟುಂಬ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಈ ಹತ್ಯೆ ನಡೆಸಿದೆ.

ನನ್ನ ಮಕ್ಕಳ ರಕ್ತವು ನಮ್ಮ ಜನರ ರಕ್ತಕ್ಕಿಂತ ಹೆಚ್ಚು ಪ್ರೀತಿಯದ್ದಲ್ಲ ಎಂದು ಹನಿಯ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಹನಿಯ ಅವರ ಇನ್ನೊರ್ವ ಸಹೋದರಿಯನ್ನು ಇಸ್ರೇಲ್ ಬಂಧಿಸಿತ್ತು.