ಪಾಂಚ್ ಪ್ಯಾರೆ ಹೇಳಿಕೆಗೆ ಕ್ಷಮೆ ಯಾಚಿಸಿ ಗುರದ್ವಾರದ ನೆಲಗುಡಿಸಲು ಹೊರಟ ಹರೀಶ್ ರಾವತ್

0
479

ಸನ್ಮಾರ್ಗ ವಾರ್ತೆ

ಚಂಡಿಗಢ: ಕಾಂಗ್ರೆಸ್‍ನ ಪಂಜಾಬ್ ನೇತೃತ್ವವನ್ನು ಪಾಂಚ್ ಪ್ಯಾರೆ ಎಂದು ಹೇಳಿ ಸಿಕ್ಕಿಬಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಸಿಖ್ ವಿಶ್ವಾಸಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. ಸಿಖ್ಖರ ನಂಬಿಕೆಯಲ್ಲಿ ಪವಿತ್ರ ಐವರು ಪುರುಷರನ್ನು ಪಾಂಚ್‍ ಪ್ಯಾರೆ ಎನ್ನಲಾಗುತ್ತದೆ. ಇದನ್ನು ಕಾಂಗ್ರೆಸ್ಸಿನ ಐದು ಮಂದಿಗೆ ವಿಶ್ಲೇಷಿಸಿದ್ದು ಹರೀಶ್‍ ರಾವತ್‍ಗೆ ಎರವಾಯಿತು.

ಹೇಳಿಕೆ ಹಿಂಪಡೆಯುವಂತೆ ಸಿಖ್ ಸಂಘಟನೆಗಳು ರಂಗಪ್ರವೇಶಿಸಿದೊಡನೆ ಅದನ್ನು ಹಿಂಪಡೆದು ಹರೀಶ್ ರಾವತ್ ಕ್ಷಮೆ ಯಾಚಿಸಿದರು ಮತ್ತು ಪ್ರಾಯಶ್ಚಿತ್ತವಾಗಿ ಗುರುದ್ವಾರದಲ್ಲಿ ನೆಲ ಶುಚಿಗೊಳಿಸುವುದಾಗಿ ಅವರು ಹೇಳಿದರು.

ಪಂಜಾಬ್ ಕಾಂಗ್ರೆಸ್ಸಿನ ಒಳಜಗಳ ತೀರ್ಮಾನಿಸಲು ಮಂಗಳವಾರ ಚಂಡಿಗಢಕ್ಕೆ ಬಂದ ಹರೀಶ್ ರಾವತ್ ಕಾಂಗ್ರೆಸ್ ಭವನದಲ್ಲಿ ಸೇರಿದ ಸಭೆಯಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಕಾರ್ಯಕಾರಿ ಅಧ್ಯಕ್ಷರಾದ ನಾಲ್ವರನ್ನು ಸೇರಿಸಿ ಈ ಹೇಳಿಕೆ ನೀಡಿದ್ದರು. ಸಿಖ್ಖರ ಪ್ರಕಾರ ಗುರು ಗೋವಿಂದ್‌ರಿಗೆ ಸಹಾಯಕರಾದ ಐವರಿಗೆ ಪಾಂಚ್‍ ಪ್ಯಾರೆ ಎಂದು ಕರೆಯಲಾಗುತ್ತದೆ.