ಹರ್ಯಾಣ ಚುನಾವಣಾ ಫಲಿತಾಂಶ ಆಘಾತಕಾರಿ, ಸ್ವೀಕಾರಾರ್ಹವಲ್ಲ ; ಕಾಂಗ್ರೆಸ್

0
156

ಸನ್ಮಾರ್ಗ ವಾರ್ತೆ

ನವದೆಹಲಿ: ಹರಿಯಾಣ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿ ವಿಜಯ ಸಾಧಿಸಿದ್ದು, ಈ ಬಾರಿಯ ಚುನಾವಣಾ ಫಲಿತಾಂಶ ಸ್ವೀಕಾರಾರ್ಹವಲ್ಲ ಎಂದು ಕಾಂಗ್ರೆಸ್ ತರಾಟೆ ತೆಗೆದಿದೆ. ಈ ಫಲಿತಾಂಶ ಅನಿರೀಕ್ಷಿತ ಮತ್ತು ಆಘಾತಕಾರಿ ಎಂದು ಆಶ್ಚರ್ಯ ವ್ಯಕ್ತಪಡಿಸಿದೆ.

ಹರ್ಯಾಣದಲ್ಲಿ ಕಾಂಗ್ರೆಸ್‌ನ ಜಯವನ್ನು ಕಸಿದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕರಾದ ಪವನ್ ಖೇರಾ ಮತ್ತು ಜೈರಾಮ್ ರಮೇಶ್, ಈ ಫಲಿತಾಂಶ ಸ್ವೀಕಾರಾರ್ಹವಲ್ಲ, ಇವು ಜನಾದೇಶದ ವಿರುದ್ಧ ವ್ಯವಸ್ಥೆಯ ಗೆಲುವನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದ್ದಾರೆ.

“ಹಿಸಾರ್, ಮಹೇಂದ್ರಗಢ ಮತ್ತು ಪಾನಿಪತ್ ಜಿಲ್ಲೆಗಳಲ್ಲಿ ಇವಿಎಂಗಳ ಕುರಿತು ನಿರಂತರ ದೂರುಗಳು ಬಂದಿವೆ. ಈ ಯಂತ್ರಗಳ ಬ್ಯಾಟರಿ ಮಟ್ಟವು 99 ಶೇಕಡಾ ಇತ್ತು. ಆ ಪ್ರದೇಶಗಳಲ್ಲಿ ಕಾಂಗ್ರೆಸ್ ಸೋತಿದೆ. ಇದಕ್ಕೆ ವಿರುದ್ಧವಾಗಿ 60–70 ಶೇಕಡಾ ಬ್ಯಾಟರಿ ಮಟ್ಟವಿದ್ದ ಯಂತ್ರಗಳಲ್ಲಿ ನಾವು ಗೆದ್ದಿದ್ದೇವೆ, ಇವು ತಿದ್ದುಪಡಿ ಮಾಡಲ್ಪಟ್ಟಿಲ್ಲ” ಎಂದು ಖೇರಾ ಹೇಳಿದರು.

“ನಾವು ಈ ಎಲ್ಲಾ ದೂರುಗಳನ್ನು ಚುನಾವಣಾ ಆಯೋಗದ ಮುಂದೆ ತರಲು ಸಿದ್ಧರಾಗಿದ್ದೇವೆ. ಇದು ಪ್ರಜಾಪ್ರಭುತ್ವದ ಗೆಲುವಲ್ಲ, ಈ ಗೆಲುವನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.