ಮುಸ್ಲಿಂ ಆ್ಯಂಕರ್ ಎಂದು ವೇದಿಕೆಯಿಂದ ಬಲವಂತವಾಗಿ ಕೆಳಗಿಸಿದರು; ಮನನೊಂದ ಆಂಕರ್

0
166

ಸನ್ಮಾರ್ಗ ವಾರ್ತೆ

ಉ.ಪ್ರ: ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ಅಸಹಿಷ್ಣುತೆಯ ಮತ್ತೊಂದು ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಝಾನ್ಸಿಯಲ್ಲಿ ನಡೆದ ದಾಂಡಿಯಾ ಕಾರ್ಯಕ್ರಮದಲ್ಲಿ ಭಾಗಿಯಾದ ಆಂಕರ್ ಮುಸ್ಲಿಂ ಎಂಬ ಕಾರಣಕ್ಕಾಗಿ ಬಲವಂತವಾಗಿ ವೇದಿಕೆಯಿಂದ ನಿರ್ಗಮಿಸುವಂತೆ ಮಾಡಲಾಗಿದೆ.

ಮುಸ್ಲಿಂ ಆ್ಯಂಕರ್ ಪ್ರದರ್ಶನ ನೀಡಿದರೆ ಕಾರ್ಯಕ್ರಮ ಮುಂದುವರಿಸಲು ಸಾಧ್ಯವಿಲ್ಲ” ಎಂದು ಮಾಲೀಕರು ಎಚ್ಚರಿಸಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರಾದ ಮಯಾಂಕ್ ಅನುರಾಗಿ ಹೇಳಿದರು. ಆಂಕರ್ ಭಾಗವಹಿಸುವಿಕೆಯು ನಗರಾದ್ಯಂತ ಪ್ರಚಾರ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಆಂಕರ್ ವೇದಿಕೆಗೆ ಬಂದಾಗ, ಮಾಲೀಕರು ಧ್ವನಿ ಮತ್ತು ವಿದ್ಯುತ್ ಎರಡನ್ನೂ ಬಂದ್ ಮಾಡಿದ್ದು, ಪ್ರದರ್ಶನ ಮುಂದುವರಿಯುವ ಮೊದಲು ಆಕೆ ವೇದಿಕೆಯನ್ನು ತಕ್ಷಣವೇ ಬಿಟ್ಟುಹೋಗುವಂತೆ ಒತ್ತಾಯಿಸಿದರು ಎಂದು ವರದಿಗಳು ತಿಳಿಸಿವೆ. ಆಕೆ ಹೊರಹೋದ ನಂತರವೇ ಕಾರ್ಯಕ್ರಮ ಮುಂದುವರೆಯಿತು..

ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆಂಕರ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಕಲಾವಿದರು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿದವರಲ್ಲ ಎಂದು ಹೇಳಿದ್ದಾರೆ. “ನಾನು ಈ ಹಿಂದೆ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇನೆ. ನಾನು ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ಬಯಸುತ್ತೇನೆ” ಎಂದವರು ಹೇಳಿದರು.