ದೇಶದಲ್ಲಿ ಕೊರೊನ ಭಾರೀ ಹೆಚ್ಚಳ; ಒಮಿಕ್ರಾನ್ ಪ್ರಕರಣ 781ಕ್ಕೇರಿಕೆ

0
441

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ ಒಮ್ರಿಕ್ರಾನ್ ರೋಗಿಗಳ ಸಂಖ್ಯೆ 781 ಆಗಿದ್ದು ಅತ್ಯಂತ ಹೆಚ್ಚು 238 ಮಂದಿ ರೋಗಿಗಳು ದಿಲ್ಲಿಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ 167 ಮಂದಿಗೆ ಒಮಿಕ್ರಾನ್ ದೃಢಪಟ್ಟಿದೆ. ಇದೆ ವೇಳೆ ಪ್ರತಿದಿನ ದೇಶದಲ್ಲಿ ಕೊರೊನ ಪ್ರಕರಣಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿ ಕಳೆದ ದಿವಸಕ್ಕಿಂತ ಶೇ. 444ರಷ್ಟು ಹೆಚ್ಚಳ ಕೊರೊನದಲ್ಲಾಯಿತು.

9195 ಮಂದಿಗೆ ಹೊಸದಾಗಿ ಕೊರೊನ ಬಂದಿದೆ ದೇಶದಲ್ಲಿ. ನಿಕಟಪೂರ್ವ ದಿನ ಇದು 6358 ಆಗಿತ್ತು. ಹೊಸದಾಗಿ 7347 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಕೊರೊನದಿಂದ ಗುಣಮುಖರಾದವರ ಸಂಖ್ಯೆ 3,42,51,292 ಆಗಿದೆ.

ಒಟ್ಟು ದಾಖಲಾದ ಪ್ರಕರಣಗಳಲ್ಲಿ 0.22 ಹೆಚ್ಚಳವಾಗಿದ್ದು ಈಗ 77.002 ಜನರು ರೋಗ ಪೀಡಿತರಾಗಿದ್ದಾರೆ. ಒಮಿಕ್ರಾನ್ ರೋಗ ಗುಜರಾತಿನಲ್ಲಿ 73 ಮಂದಿಗಿದೆ. ಕೇರಳದಲ್ಲಿ 65 ಮಂದಿಗೆ, ತೆಲಂಗಾಣದಲ್ಲಿ 62, ರಾಜಸ್ಥಾನದಲ್ಲಿ 46 ಮಂದಿಗೆ ಒಮಿಕ್ರಾನ ಇದೆ. ಇದು ಹೆಚ್ಚು ಒಮಿಕ್ರಾನ್ ಪೀಡಿತ ರಾಜ್ಯಗಳು ಎಂದು ಆರೋಗ್ಯ ಸಚಿವಾಲಯ ತಿಳಿಸಿತು. ನಿನ್ನೆ ಕೇರಳದಲ್ಲಿ 2474 ಮಂದಿಗೆ ಕೊರೊನ ದೃಢಪಟ್ಟಿದದ್ದು ರಾಜ್ಯದಲ್ಲಿ ಈಗ 1, 16,378 ಮಂದಿ ನಿರೀಕ್ಷಣೆಯಲ್ಲಿದ್ದಾರೆ. ಇವರು ಕೊರೊಂಟೈನ್ ಮಾಡಲಾಗಿದೆ. ಈ ಮಧ್ಯೆ ಓಮಿಕ್ರಾನ್ ನ ಅಪಾಯವು ಇನ್ನೂ ಹೆಚ್ಚಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.