ಅಪಾರ ಸಂಖ್ಯೆಯ ಇಸ್ರೇಲ್ ಶಸ್ತ್ರಸಜ್ಜಿತ ವಾಹನಗಳನ್ನು ಹಾನಿ ಮಾಡಿದ ಹಿಝ್ಬುಲ್ಲ, ಫೆಲೆಸ್ತೀನ್ ಪಡೆ; ದುರಸ್ತಿ ಸಾಧ್ಯವಿಲ್ಲ ಎಂದ ಇಸ್ರೇಲ್

0
180

ಸನ್ಮಾರ್ಗ ವಾರ್ತೆ

ಟೆಹರಾನ್: ಹಿಜ್ಬುಲ್ಲಾ ಮತ್ತು ಪ್ಯಾಲೆಸ್ತೀನ ಪ್ರತಿರೋಧ ಪಡೆಗಳು ಇಸ್ರೇಲಿ ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳಿಗೆ ಅಪಾರ ಹಾನಿ ಮಾಡಿದೆ ಎಂಬುದನ್ನು ಇಸ್ರೇಲಿ ಮಾಧ್ಯಮಗಳು ಒಪ್ಪಿಕೊಂಡಿವೆ.

ಇಸ್ರೇಲಿ ಸೇನೆಯ ಉನ್ನತ ಅಧಿಕಾರಿ ಮೂಲಗಳ ಪ್ರಕಾರ, ಈ ಪ್ರಮಾಣದ ಹಾನಿಯಾದ ಟ್ಯಾಂಕ್‌ಗಳು, ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳು ಮತ್ತು ಇತರ ಶಸ್ತ್ರಸಜ್ಜಿತ ವಾಹನಗಳನ್ನು ದುರಸ್ತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ‘ಯೆಡಿಯೊತ್ ಅಹ್ರೊನೊತ್’ ಪತ್ರಿಕೆ ವರದಿ ಮಾಡಿದೆ.

ಹಿಜ್ಬುಲ್ಲಾ ಮತ್ತು ಫೆಲೆಸ್ತೀನ್ ಪ್ರತಿರೋಧ ಪಡೆಗಳಿಂದ ಹಾನಿಯೊಳಗಾದ ಟ್ಯಾಂಕ್‌ಗಳು, ಶಸ್ತ್ರಾಸ್ತ್ರಗಳ ನಿಖರವಾದ ಸಂಖ್ಯೆಯನ್ನು ಮೂಲಗಳು ಉಲ್ಲೇಖಿಸಿಲ್ಲ.

ಹಾನಿಯಾದ ವಾಹನಗಳಲ್ಲಿ ಮೆರ್ಕಾವಾ ಟ್ಯಾಂಕ್‌ಗಳು ಮತ್ತು ಟೈಗರ್ ಮತ್ತು ಎಟಾನ್ ಶಸ್ತ್ರಸಜ್ಜಿತ ವಾಹನಗಳು ಸೇರಿವೆ. ಇವುಗಳು ಇಸ್ರೇಲಿ ಸೇನೆಯ ನಿರ್ವಹಣಾ ಕೇಂದ್ರದ ಅಡಿಯಲ್ಲಿ ಇದೆ.

— IRNA