ಹಿಜ್ಬುಲ್ಲಾ-ಇಸ್ರೇಲ್ ಸಂಘರ್ಷ; ಲೆಬನಾನಿನ 2,367 ಮಂದಿ ಸಾವು

0
60

ಸನ್ಮಾರ್ಗ ವಾರ್ತೆ

ಬೈರುತ್: ಹಿಜ್ಬುಲ್ಲಾ-ಇಸ್ರೇಲ್ ಸಂಘರ್ಷದ ಪ್ರಾರಂಭವಾದ ದಿನದಿಂದಲೇ ಲೆಬನಾನ್ ಮೇಲೆ ಇಸ್ರೇಲ್ ನಿರಂತರ ವೈಮಾನಿಕ ದಾಳಿ ನಡೆಸುತ್ತಿದ್ದು, ಈ ದಾಳಿಯಿಂದ ಸುಮಾರು 2,367 ಮಂದಿ ಸಾವನ್ನಪ್ಪಿದ್ದಾರೆ. ಅದೇ ಸಂದರ್ಭದಲ್ಲಿ ಗಾಯಗಳ ಸಂಖ್ಯೆ 11,088 ನ್ನು ದಾಟಿದೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಮಾತ್ರವಲ್ಲದೆ ಅಕ್ಟೋಬರ್ 15 ರಂದು ಲೆಬನಾನ್‌ನ ವಿವಿಧ ಪ್ರದೇಶಗಳ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 17 ಕ್ಕೆ ತಲುಪಿದ್ದು, ಗಾಯಗಳು 182 ರಷ್ಟು ಆಗಿದೆ ಎಂದು ಸಚಿವಾಲಯ ಗುರುವಾರ ಹೇಳಿದೆ.