ಟೆಲ್ ಅವಿವ್ ಮೇಲೆ ಹಿಝ್ಬುಲ್ಲಾ ರಾಕೆಟ್ ದಾಳಿ: ತುರ್ತು ಪರಿಸ್ಥಿತಿ ಘೋಷಿಸಿದ ಇಸ್ರೇಲ್

0
101

ಸನ್ಮಾರ್ಗ ವಾರ್ತೆ

ಇಸ್ರೇಲಿನ ತೆಲ್ ಅವಿವ್ ಮತ್ತು ಹೈಫಾ ನಗರದ ಮೇಲೆ ಹಿಝ್ಬುಲ್ಲ ರಾಕೆಟ್ ದಾಳಿ ನಡೆಸಿದೆ. ತೆಲ್ ಅವಿವ್ ಹತ್ತಿರದ ಗಿಲೋಟ್ ಸೇನಾ ಕೇಂದ್ರದ ಮೇಲೆ ರಾಕೆಟ್ ಅಪ್ಪಳಿಸಿದೆ ಎಂದು ವರದಿಯಾಗಿದೆ. ಈ ಘಟನೆಯ ಬೆನ್ನಿಗೆ ಇಸ್ರೇಲ್ ನಾದ್ಯಂತ ಸೈರನ್ ಮೊಳಗಿದೆ ಮತ್ತು ಆ ಬಳಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಹೈಫಾದ ಸ್ಟೆಲ್ಲ ಮೇರಿಸ್ ಸೇನಾ ಕೇಂದ್ರವನ್ನು ಗುರಿಯಾಗಿಟ್ಟುಕೊಂಡು ಹಿಝ್ಬುಲ್ಲ ಅಕ್ರಮಣ ನಡೆಸಿದೆ. ಮಾತ್ರವಲ್ಲ ಸೀಸೇರಿಯ ನಗರದ ಮೇಲೆ ಮಾಡಲಾದ ದಾಳಿ ಎಂದು ಹೇಳಿ ಹಿಝ್ಬುಲ್ಲ ಕೆಲವು ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಆದರೆ ಈ ದಾಳಿಯ ಹೊಣೆಗಾರಿಕೆಯನ್ನು ಅದು ವಹಿಸಿಕೊಂಡಿಲ್ಲ.

ಇದೇ ವೇಳೆ ಪಶ್ಚಿಮ ಇಸ್ರೇಲ್ ನ ಮೇಲೆ ನಡೆಸಿದ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಹಿಝ್ಬುಲ್ಲದ ಆಕ್ರಮಣದ ತಕ್ಷಣ ಇಸ್ರೇಲ್ ನ ಉದ್ದಕ್ಕೂ ಸೈರನ್ ಮೊಳಗಿರುವುದಾಗಿ ಅಲ್ ಜಝೀರ ಚಾನೆಲ್ ವರದಿ ಮಾಡಿದೆ.