ವಿಮಾನಯಾನ ದರ ಹೆಚ್ಚಳ: ಕೇಂದ್ರ- ರಾಜ್ಯ ಸರಕಾರಗಳಿಂದ ವಿವರಣೆ ಕೇಳಿದ ಹೈಕೋರ್ಟು!

0
501

ಸನ್ಮಾರ್ಗ ವಾರ್ತೆ

ಕೊಚ್ಚಿ,ಆ. 23: ನಿಭಿಡತೆಯ ಸಮಯದಲ್ಲಿ ಭಾರತದ ವಿಮಾನ ಟಿಕೆಟ್‍ಗಳ ದರವನ್ನು ಅನ್ಯಾಯವಾಗಿ ಹೆಚ್ಚಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಕುರಿತು ಕೇರಳ ಹೈಕೋರ್ಟು ಕೇಂದ್ರ-ರಾಜ್ಯ ಸರಕಾರಗಳಿಂದ ವಿವರಣೆಯನ್ನು ಕೇಳಿದೆ. ಸಿವಿಲ್ ಏವಿಯೇಶನ್ ಡೈರಕ್ಟರ್ ಜನರಲ್‍ಗೆ ಸಲ್ಲಿಸಲಾದ ಮನವಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮುಸ್ಲಿಂ ಕಲ್ಚರಲ್ ಸೆಂಟರ್ ಉಪಾಧ್ಯಕ್ಷ ತಿರುನಾವಯದ ಅಬ್ದುಲ್ ಅಝೀಝ್ ಕೋಲಿಯಾಡನ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

ಕೇಂದ್ರ ಸರಕಾರ, ಕಾರ್ಪೊರೇಟ್ ಸಚಿವಾಲಯ, ಕಾರ್ಯದರ್ಶಿ, ಸಿವಿಲ್ ಏವಿಯೇಶನ್ ಡೈರಕ್ಟರ್ ಜನರಲ್, ಏರ್ ಇಂಡಿಯಾ, ಕೇರಳ ಸರಕಾರದಿಂದ ಕೋರ್ಟು ವಿವರಣೆ ಕೇಳಿದೆ. ವಿಶೇಷ ಸಂದರ್ಭಗಳಲ್ಲಿ, ಹಬ್ಬದ ಸಮಯದಲ್ಲಿ ಏರ್ ಇಂಡಿಯಾ ಸಹಿತ ವಿಮಾನ ಕಂಪೆನಿಗಳು ಟಿಕೆಟು ದರವನ್ನು ನಿರ್ದಾಕ್ಷಿಣ್ಯವಾಗಿ ಹೆಚ್ಚಿಸುತ್ತಿದೆ ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ. ಕೇರಳ ಪ್ರಳಯದಿಂದ ಬಾಧಿಸಿದ್ದಾಗಲೂ ಪ್ರಯಾಣ ದರವನ್ನು ವಿಮಾನ ಕಂಪೆನಿಗಳು ಎಂಟರಿಂದ ಹತ್ತು ಪಟ್ಟು ಹೆಚ್ಚಿದ್ದವು ಎಂದು ಅರ್ಜಿದಾರರು ದೂರಿದ್ದರು.