ಹಿಮಾಚಲ ಪ್ರದೇಶ; ಹಿಂದೂ ಅಂಗಡಿಗಳಲ್ಲಿ “ಸನಾತನ ಸಬ್ಜಿವಾಲಾ” ಪೋಸ್ಟರ್‌ ಹಂಚಿಕೆ

0
67

ಸನ್ಮಾರ್ಗ ವಾರ್ತೆ

ಸಂಜೌಲಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಸಿ ನ್ಯಾಯಾಲಯದ ತೀರ್ಪಿನ ವಿರುದ್ಧ ಹಿಮಾಚಲ ಮುಸ್ಲಿಂ ಸಂಘಟನೆಯು ಉಚ್ಚ ನ್ಯಾಯಾಲಯದ ಮೊರೆ ಹೋಗಬೇಕೆಂದು ಮಾತನಾಡುತ್ತಿದ್ದರೆ, ಇನ್ನೊಂದೆಡೆ ದೇವಭೂಮಿ ಹೋರಾಟ ಸಮಿತಿ (ದೇವಭೂಮಿ ಸಂಘರ್ಷ ಸಮಿತಿ) ಸಂಜೌಲಿ ಮಾರುಕಟ್ಟೆಯಲ್ಲಿ ಹೊರ ರಾಜ್ಯಗಳಿಂದ ಬರುವ ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರವನ್ನು ಆರಂಭಿಸಿದೆ. ದೇವಭೂಮಿ ಸಂಘರ್ಷ ಸಮಿತಿಯು ಸಂಜೌಲಿಯ ಹಿಂದೂ ಅಂಗಡಿಗಳಲ್ಲಿ ಸನಾತನ್ ಸಬ್ಜಿ ಮತ್ತು ದುಕಾನ್ ವಾಲಾ ಎಂಬ ಹೆಸರಿನ ಪೋಸ್ಟರ್‌ಗಳನ್ನು ಹಾಕುತ್ತಿದೆ.

ಶಿಮ್ಲಾದ ಉಪನಗರವಾದ ಸಂಜೌಲಿ ಬಜಾರ್‌ನಲ್ಲಿರುವ ಹಣ್ಣು ಮತ್ತು ತರಕಾರಿ ಅಂಗಡಿಗಳಲ್ಲಿ ಸಮಿತಿಯಿಂದ ಸನಾತನ ಸಬ್ಜಿವಾಲಾ (ಸನಾತನಿ ತರಕಾರಿಯವ) ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ. ಈ ಸಮಯದಲ್ಲಿ, ಹಿಂದೂ ಅಂಗಡಿಗಳಿಂದ ಮಾತ್ರ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸಲು ಜನರಿಗೆ ಮನವಿ ಮಾಡಲಾಗುತ್ತಿದೆ.