ಹಿಂದ್ ರಜಬ್ ಹಾಡು: ಮಾಕ್ಲೆ ಮೋರ್ ಸಂಗೀತ ಕಚೇರಿಗೆ ಇಸ್ರೇಲ್ ಅಸಮಾಧಾನ

0
338

ಸನ್ಮಾರ್ಗ ವಾರ್ತೆ

ನ್ಯೂ ಜರ್ಸಿಯ ಮೆಟ್ ಲೈಫ್ ಕ್ರೀಡಾಂಗಣದಲ್ಲಿ ಎಡ್ ಶೀರನ್ ಅವರ ಸಂಗೀತ ಕಚೇರಿಯಲ್ಲಿ ಅಮೆರಿಕನ್ ರಾಪರ್ ಮಾಕ್ಲೆ ಮೋರ್ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅವರ ಉಳಿದ ಪ್ರವಾಸ ದಿನಾಂಕ ಗಳಿಂದ ತೆಗೆದು ಹಾಕಬೇಕೆಂದು ಇಸ್ರೇಲ್ ಅಮೆರಿಕನ್ ಕೌನ್ಸಿಲ್ ಕರೆ ನೀಡಿದೆ.

80000ಕ್ಕೂ ಹೆಚ್ಚು ಜನರ ಗುಂಪಿನ ಮುಂದೆ ಮ್ಯಾಕ್ಲೆಮೋರ್ ಅವರು ತಮ್ಮ ಜನಪ್ರಿಯ ಹಾಡು ಹಿಂಡ್ಸ್ ಹಾಲ್ ಅನ್ನು ಪ್ರದರ್ಶಿಸಿದರು. ಆದರೆ ಕ್ರೀಡಾಂಗಣದ ದೊಡ್ಡ ಪರದೆಗಳ ಮೇಲೆ ಗಾಜಾ ಮತ್ತು ಆಕ್ರಮಿತ ಪಶ್ಚಿಮದಂಡೆಯ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಫೆಲೆಸ್ತೀನ್ ಜೊತೆಗೆ ಅವರು ಕ್ಯೂಬಾ ಕಾಂಗೋ ಸುಡಾನ್ ಮತ್ತು ಇರಾನ್ ಗಳ ಸ್ವಾತಂತ್ರ್ಯಕ್ಕಾಗಿ ಕರೆ ನೀಡಿದರು.

ಮ್ಯಾಕ್ಲೇ ಮೋರ್ ಪ್ರೇಕ್ಷಕರಲ್ಲಿದ್ದ ಯಹೂದಿ ಸಮುದಾಯವನ್ನು ಉದ್ದೇಶಿಸಿ ನಿರ್ದಿಷ್ಟವಾಗಿ ಮಾತಾಡಿದರು. ಇಸ್ರೇಲ ನೀತಿಗಳು ಮತ್ತು ನರಮೇಧವನ್ನು ಟೀಕಿಸುವುದು ಎಂದಿಗೂ ಯಹೂದಿ ಜನರ ಮೇಲಿನ ದಾಳಿಯಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಗಾಝಾ ಹತ್ಯಾಕಾಂಡ ವನ್ನು ಕೊನೆಗೊಳಿಸಲು ಕರೆ ನೀಡುವ ಹತ್ಯಾಕಾಂಡದಿಂದ ಬದುಕುಳಿದ ವ್ಯಕ್ತಿಯ ಸಂದೇಶವನ್ನು ಕ್ರೀಡಾಂಗಣದ ಪರದೆಗಳಲ್ಲಿ ಪ್ರದರ್ಶಿಸಲಾಯಿತು.

ಆದರೆ ಇಸ್ರೇಲ್ ಅಮೆರಿಕನ್ ಕೌನ್ಸಿಲ್ ಈ ಸಂಗೀತ ಕಚೇರಿಯನ್ನು ರಾಜಕೀಯಕ್ಕಾಗಿ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದೆ.

ಗಾಝದಲ್ಲಿ ಹತ್ಯೆಗೀಡಾದ ಫೆಲೆಸ್ತೀನಿ ಮಗು ಹಿಂದ್ ರಜಬ್ ಸ್ಮರಣಾರ್ಥ 2024ರಲ್ಲಿ ಬಿಡುಗಡೆಯಾದ ಹಿಂಡ್ಸ್ ಹಾಲ್ ಹಾಡನ್ನು ಮಾಕ್ಲೆ ಮೋರ್ ಬರೆದಿದ್ದಾರೆ.