ಇಸ್ಲಾಮಿಸ್ಟರು ರಾಜಕೀಯವನ್ನು ನೋಡಿದ್ದು ಹೇಗೆ?

0
173

ಸನ್ಮಾರ್ಗ ವಾರ್ತೆ

ಅಬ್ದುಸ್ಸಲಾಮ್ ವಾಣಿಯಂಬಲಮ್

ದೇಶದ ಆರು ಸ್ಥಂಭಗಳಲ್ಲಿ ಪ್ರಮುಖ ಘಟಕವಾದ ಸೆಕ್ಯುಲರಿಝಮ್ ಅನ್ನು ಭದ್ರವಾಗಿಸಿ ಖಿಲಾಫತ್‌ನ ಹಂತಕ ಅತಾತುರ್ಕನ ಸಮಾಧಿಯ ಬಳಿ ಸೆಲ್ಯೂಟ್ ಹೊಡೆದು ಅದೇ ಅತಾತುರ್ಕನ ಚಿತ್ರದ ಮುಂದೆ ಕುಳಿತು ತಮ್ಮ ಅಜೆಂಡಾವನ್ನು ಅನುಷ್ಠಾನಕ್ಕೆ ತರಲು ಟರ್ಕಿಯ ಇಸ್ಲಾಮಿಸ್ಟರು ತೋರಿದ ಶಕ್ತಿ, ಸಾಮರ್ಥ್ಯವು ಅವರನ್ನು ಗಟ್ಟಿಯಾಗಿ ನೆಲೆಯೂರುವಂತೆ ಮಾಡಿತು.

ಸೇನೆಯು 2016ರ ಜುಲೈನಲ್ಲಿ ಬುಡಮೇಲುಗೊಳಿಸಲು ಮಾಡಿದ ಪ್ರಯತ್ನವನ್ನು ಜನರ ಮೂಲಕ ಎದುರಿಸಿದ ಉರ್ದುಗಾನ್ ಅದನ್ನು ವಿಫಲಗೊಳಿಸಿದ್ದು ವಿಶ್ವದ ಇಸ್ಲಾಮಿಸ್ಟರಲ್ಲಿ ಹೊಸ ಆವೇಶ ಪುಟಿದೇಳಲು ಸಹಾಯಕವಾಯಿತು.

ಆದರೆ ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿನ ಇಸ್ಲಾಮೀ ಸಂಘಟನೆಗಳು ಟರ್ಕಿ ಮಾದರಿಯನ್ನು ಅನುಸರಿಸಿ ಅಳವಡಿಸಿ ಮುಂದುವರಿಸಿಕೊಂಡು ಹೋಗಲು ಪರಿಸ್ಥಿತಿಯು ಪೂರಕವಾಗಿಲ್ಲ. ಟರ್ಕಿಯ ಜನರು ಯುರೋಪಿಯನ್ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಸಿರಾಗಿಸಿದರೆ ಹೆಚ್ಚಿನವರು ಇಸ್ಲಾಮೀ ಮೌಲ್ಯಗಳ ಜೊತೆ ಒಲವುಳ್ಳವರಾಗಿದ್ದಾರೆ.

ಪ್ರಕೃತಿದತ್ತವಾಗಿ ಧೈರ್ಯಶಾಲಿಗಳಾದ ಅವರು ಒಟ್ಟೋಮನ್‌ನ ಸಾಮ್ರಾಜ್ಯದ ಪ್ರಭಾವೀ ಕಾಲ ಮತ್ತೆ ಮರಳಿ ಬರುವ ಕನಸು ಕಾಣುತ್ತಿದ್ದಾರೆ. ಕಠಿಣ ಪರಿಶ್ರಮಿಗಳು, ಬಹಳ ಬುದ್ಧಿವಂತ ಪ್ರಜೆಗಳಾಗಿರುವ ಅವರು ವಿದೇಶಿಗಳ ಆಡಳಿತಕ್ಕೆ ಯಾವುದೇ ರೀತಿಯಲ್ಲಿ ತಲೆಬಾಗದವರಾಗಿದ್ದಾರೆ. ಅವರಿಗೆ ಉರ್ದುಗಾನ್ ಎಂಬ ನಾಯಕ ದೊರೆತಾಗ ಅವರ ಆತ್ಮವಿಶ್ವಾಸದಲ್ಲಿ ವರ್ಧನೆಯುಂಟಾಯಿತು. ಒಂದು ರೀತಿಯಲ್ಲಿ ಟರ್ಕಿ ಪ್ರಬಲವಾದ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ನ್ಯಾಯಬದ್ದವಾದ ಚುನಾವಣೆಯಿರುವ ಆರ್ಥಿಕ, ಸೈನಿಕ ವಲಯಗಳಲ್ಲಿ ಸ್ವಾಭಿಮಾನ ಇರುವ ತಮ್ಮದೇ ಆದ ಶಕ್ತಿಯನ್ನು ಗಳಿಸಿಕೊಂಡ ದೇಶವಾಗಿದೆ.

ಇಂತಹದ್ದೊಂದು ಪರಿಸ್ಥಿತಿ ಮುಸ್ಲಿಮ್ ಜಗತ್ತಿನಲ್ಲಿ ಇಸ್ಲಾಮೀ ಸಂಘಟನೆಗಳು ಸಕ್ರಿಯವಾಗಿರುವ ಹೆಚ್ಚಿನ ದೇಶಗಳಲ್ಲಿಲ್ಲ. ಅದಕ್ಕಾಗಿ ಟರ್ಕಿಯನ್ನು ಮಾದರಿಯಾಗಿ ಸ್ವೀಕರಿಸಿದ ಮಾತ್ರಕ್ಕೆ ಇಸ್ಲಾಮೀ ಸಂಘಟನೆಗಳಿಗೆ ಯಶಸ್ಸು ದೊರೆಯಬೇಕೆಂದಿಲ್ಲ. ಧಾರ್ಮಿಕವಾದ ಅಭಿಸಂಭೋದನೆಗೆ ಬದಲಾಗಿ ಜನರನ್ನು ರಾಜಕೀಯವಾಗಿ ಮಾತ್ರ ಎದುರುಗೊಳ್ಳುವ ಟರ್ಕಿ ಮಾದರಿಯನ್ನು ಹಲವು ಇಸ್ಲಾಮೀ ಸಂಘಟನೆಗಳು ಅನುಸರಿಸಿತ್ತು. ಅದಕ್ಕಾಗಿಯೇ ಸಂಘಟನೆಗಳಿಗಿಂತ ಭಿನ್ನವಾಗಿ ಅದು ರಾಜಕೀಯ ಪಕ್ಷಗಳನ್ನು ಸ್ಥಾಪಿಸಿತು.

ಈ ದಿಸೆಯಲ್ಲಿ ಮಹತ್ತರವಾದ ಅನೇಕ ಬದಲಾವಣೆಗಳು ಟ್ಯುನೀಶಿಯಾದ ಅನ್ನಹ್ದದಲ್ಲಿ ಕಂಡು ಬಂತು. 2016ರಲ್ಲಿ ಫೆಲೆಸ್ತೀನಿನ ಫತಹ್ ಪಕ್ಷ ಸಮ್ಮೇಳನದಲ್ಲಿ ಧರ್ಮದ ಉಡುಗೆಯನ್ನು ಸಂಪೂರ್ಣವಾಗಿ ಕಳಚಿಟ್ಟು ನಮ್ಮದು ಒಂದು ರಾಷ್ಟ್ರೀಯ ರಾಜಕೀಯ ಪಕ್ಷವೆಂದು ಘೋಷಿಸಿತು. ನಮ್ಮದು ಸಂದೇಶ ಪ್ರಚಾರವಲ್ಲ ರಾಜಕೀಯ ಅಜೆಂಡಾವಾಗಿದೆ ಎಂದು ಪಕ್ಷವು ಒತ್ತಿ ಹೇಳಿತು.

“ಇಸ್ಲಾಮೀ ರಾಜಕೀಯದ ಭಾಗವಾಗಿ ಕೆಲವರು ಅನ್ನಹ್ದವನ್ನು ನೋಡುತ್ತಿದ್ದಾರೆ. ಆದರೆ ತನ್ನ ಕಾರ್ಯ ಚಟುವಟಿಕೆಯ ಮೂಲಕ ಅನ್ನಹ್ದ ಭಾರೀ ಮುಂದುವರಿದಿದೆ. ಇಸ್ಲಾಮೀ ರಾಜಕೀಯ ಎಂಬ ನಾಮವಿರುವ ಅನ್ನಹ್ದದ ಐಡೆಂಟಿಟಿಯು ಭವಿಷ್ಯದ ಯೋಜನೆಗಳನ್ನು ಪ್ರತಿನಿಧಿಸುವುದಿಲ್ಲ.”

ಪೊಲಿಟಿಕಲ್ ಇಸ್ಲಾಮ್‌ಗೆ ಬದಲಾಗಿ ಡೆಮೋಕ್ರಟಿಕ್ ಇಸ್ಲಾಮನ್ನು ಅನ್ನಹ್ದ ಪ್ರತಿನಿಧಿಸಲು ಹೆಚ್ಚು ಇಷ್ಟಪಡುತ್ತಿದೆ. ಧರ್ಮ ಮತ್ತು ರಾಜಕೀಯವನ್ನು ಬೇರ್ಪಡಿಸುವುದರ ವಿರುದ್ಧ ಇದ್ದರೂ ಎರಡೂ ಪ್ರತ್ಯೇಕವಾಗಿರಬೇಕೆಂಬ ನಿಲುವಿನೆಡೆಗೆ ಅನ್ನಹ್ದ ಮುಂದುವರಿದಿದೆ. ಬದಲಾಗಿ ಧರ್ಮ ಪ್ರಚಾರದ ಚಟುವಟಿಕೆಗಳು ಪಕ್ಷಕ್ಕೆ ಅತೀತವಾಗಿ ಮುಸ್ಲಿಮ್ ಸಮಾಜದ ಸಾರ್ವಜನಿಕ ವಲಯಗಳಲ್ಲಿ ನಿರ್ವಹಿಸಬೇಕೆಂಬುದು ಅದರ ಉದ್ದೇಶವಾಗಿದೆ. ಮೊರೊಕ್ಕೋದ ಜಸ್ಟಿಸ್ ಆಂಡ್ ಡೆವಲಪ್ ಮೆಂಟ್ ಪಕ್ಷವು ಇದೇ ನಿಲುವನ್ನು 2012ರಲ್ಲಿ ತಳೆದಿತ್ತು.

ಇಸ್ಲಾಮೀ ಸಂಘಟನೆಗಳು ಮುತುವರ್ಜಿ ವಹಿಸಿಕೊಂಡು ಸ್ಥಾಪಿಸಿದ ರಾಜಕೀಯ ಪಕ್ಷಗಳು ಇಟ್ಟುಕೊಂಡಂತಹ ಹೆಸರುಗಳು ಕೂಡಾ ಅದರ ನಿಲುವಿನಲ್ಲಿ ಕಂಡು ಬರುವ ಬದಲಾವಣೆಯ ಸೂಚನೆಯಾಗಿದೆ. 1998 ರಲ್ಲಿ ಜಸ್ಟಿಸ್ ಆಂಡ್ ಡೆವಲಪ್‌ಮೆಂಟ್ ಪಾರ್ಟಿ ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿದ ಮೊರೊಕ್ಕೋದ ಇಸ್ಲಾಮೀ ಸಂಘಟನೆಗಳು ಈ ದಿಸೆಯಲ್ಲಿ ಮಾರ್ಗದರ್ಶನ ಮಾಡಿತು.

2011 ರಲ್ಲಿ ಉರ್ದುಗಾನ್‌ರ ಪಕ್ಷವು ಆ ಹೆಸರನ್ನು ಸ್ವೀಕರಿಸಿತು. ಪ್ರಯೋಗದಲ್ಲಿ ಮುಂದುವರಿದ ಟರ್ಕಿಯ ಇಸ್ಲಾಮಿಸ್ಟರು ಮೊರೊಕ್ಕೊವನ್ನು ಹಿಂದಿಕ್ಕಿದರು. ಈಜಿಪ್ಟ್ ನಲ್ಲಿ ಪ್ರೀಡಂ ಆಂಡ್ ಜಸ್ಟಿಸ್ ಎಂಬ ಪಕ್ಷವು (2011) ಲಿಬಿಯಾದಲ್ಲಿ ಜಸ್ಟಿಸ್ ಆಂಡ್ ಕಂಸ್ಟ್ರಕ್ಷನ್ (2012) ಇದಕ್ಕೆ ಸಮಾನವಾದ ಉದಾಹರಣೆಗಳಾಗಿವೆ. ಟ್ರಾಯ್ಕ್ ಸ್ಥಾಪಿಸಿದ ಸೆಕ್ಯುಲರಿಸ್ಟ್ ಗಳೊಂದಿಗೆ ಸೇರಿಕೊಂಡು ಐಕ್ಯರಂಗ ಸ್ಥಾಪಿಸಲು ಧೈರ್ಯ ತೋರಿಸಿತು. ಬುಡಮೇಲು ಗೊಳಿಸಬಹುದೆಂದು ಕಂಡು ಬಂದಾಗ ಬಹುಮತವಿದ್ದು ಕೂಡಾ ಅಧಿಕಾರದಿಂದ ನಿರ್ಗಮಿಸಲು ಟ್ಯುನೀಶಿಯಾದಲ್ಲಿ ಪ್ರತಿ ಕ್ರಾಂತಿ ಚಟುವಟಿಕೆಗಳಿಗೆ ತಡೆ ಹಾಕಲು ಅನ್ನಹ್ದ ಪಕ್ಷಕ್ಕೆ ಒಂದು ಹಂತದ ವರೆಗೆ ಸಾಧ್ಯವಾಯಿತು. ಅದು ಸಾಮಾನ್ಯವಾಗಿ ರಾಷ್ಟ್ರೀಯವಾದ ಒಗ್ಗಟ್ಟಿನ ಬಗ್ಗೆ ಪ್ರಜಾಪ್ರಭುತ್ವ ರೀತಿಯ ವ್ಯವಸ್ಥೆಯ ಕುರಿತು ದನಿಯೆಬ್ಬಿಸಿತು. ಸೆಕ್ಯುಲರಿಸ್ಟ್ ಆದ ಮುನ್ಸಿಫ್ ಮರ್ಝೂಕ್ ಜೊತೆ ಸೇರಿ ಅಷ್ಟೇ ಅಲ್ಲ, ಇಸ್ಲಾಮೀ ವಿರೋಧಿಯಾಗಿದ್ದ ಬಿನ್ ಅಲೀ ಆಡಳಿತದ ಅವಶೇಷವಾಗಿದ್ದ ಡಿಬ್ಸಿ ಜೊತೆ ಆಡಳಿತದಲ್ಲಿ ಸಹಕರಿಸಿತು. ಆದರೆ ಹೊಸ ಟ್ಯುನೀಶಿಯಾ ಅಧ್ಯಕ್ಷ ಪ್ರತಿಕ್ರಾಂತಿಗೆ ಮುಂದಡಿಯಿಟ್ಟಾಗ ಅನ್ನಹ್ದದ ಕಾರ್ಯ ಯೋಜನೆಗಳು ಫಲ ನೀಡಲಿಲ್ಲ.