ಹೆಚ್.ಆರ್.ಎಸ್ – ಅಝೀಂ ಪ್ರೇಮ್‌ಜಿ ಫೌಂಡೇಶನ್ ಸಮ್ಮಿಲನ ಕಾರ್ಯಕ್ರಮ

0
949

ಸನ್ಮಾರ್ಗ ವಾರ್ತೆ

ಬೆಂಗಳೂರು: ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (HRS) ಹಾಗೂ ಅಝೀಂ ಪ್ರೇಮ್ ಜಿ ಫೌಂಡೇಶನ್‌ನ ಸಮ್ಮಿಲನ ಕಾರ್ಯಕ್ರಮವು ಬೆಂಗಳೂರಿನ ಬಿಫ್ಟ್ ಸಭಾಂಗಣದಲ್ಲಿ ನಡೆಯಿತು.

ಬೆಂಗಳೂರಿನ ಎಂ.ಎಸ್. ಪಾಳ್ಯ, ಯಶವಂತಪುರ ಹಾಗೂ ಮೈಸೂರು ರಸ್ತೆ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ಆರೋಗ್ಯಕ್ಕೆ ಸಂಬಂಧಪಟ್ಟ ಸರ್ವೆ, ಆಹಾರ ಕಿಟ್, ವ್ಯಾಕ್ಸಿನೇಷನ್‌ ಮುಂತಾದ ಕಾರ್ಯಗಳು ನಡೆಯುತ್ತಿದ್ದು, ಆ ಪ್ರದೇಶದ ನಾಗರಿಕರು ಇವರ ಸೇವೆಯಿಂದ ಪ್ರಭಾವಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮೆಟ್ರೋ ಕಾರ್ಯದರ್ಶಿ ಡಾ. ಫಕ್ರುದ್ದೀನ್, ಹೆಚ್ ಆರ್ ಎಸ್ ಡೈರೆಕ್ಟರ್ ಕೆ.ಎಂ. ಅಶ್ರಫ್, ಕಾರ್ಯದರ್ಶಿ ಅಕ್ಬರ್ ಅಲಿ, ರಾಜ್ಯಾಧ್ಯಕ್ಷರಾದ ಡಾ. ಸಾದ್ ಬೆಳ್ಗಾಮಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರೋಜೆಕ್ಟ್ ಮ್ಯಾನೇಜರ್ ಮಹಮ್ಮದ್ ಮಿಸ್ಬಾ ವಿವರಣೆಯನ್ನು ನೀಡಿದರು. ಇಕ್ಬಾಲ್ ಗುಡಿಯಾಲ್ ಕಾರ್ಯಕ್ರಮ ನಿರೂಪಿಸಿದರು.