ಪೌರತ್ವ ತಿದ್ದು ಪಡಿ ಕಾನೂನು ಬೆಂಬಲಿಸಿ ನಡೆಸಲಾಗುವ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕನಿಗೆ ಅನುಮತಿಯಿಲ್ಲ

0
959

ಸನ್ಮಾರ್ಗ ವಾರ್ತೆ-

ಹೈದರಾಬಾದ್, ಡಿ. 27: ಪೌರತ್ವ ತಿದ್ದುಪಡಿ ಕಾನೂನು ಬೆಂಬಲಿಸಿ ನಡೆಸಲಾಗುವ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ ರಾಜಾಸಿಂಗ್ ಗೆ ಹೈದರಾಬಾದ್ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಪೌರತ್ವ ತಿದ್ದುಪಡಿ ವಿರುದ್ಧ ಮಾರ್ಚ್ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಡಿಸೆಂಬರ್ 28ಕ್ಕೆ ಮಿಲಿಯನ್ ಮಾರ್ಚ್ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲು ಅನುಮತಿ ಕೇಳಾಗಿತ್ತು. ಪೊಲೀಸರು ಅನುಮತಿ ನೀಡಿಲ್ಲ. ಆದರೆ ಮಾರ್ಚ್ ನಡೆಸಿಯೇ ಸಿದ್ಧ ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ.

ನಗರದಲ್ಲಿ ಪ್ರತಿಭಟನೆ ನಡೆಸಲು ಯಾರಿಗೂ ಅನುಮತಿ ಇಲ್ಲ ಎಂಬ ಸುಳ್ಳು ವದಂತಿಯಿದೆ. ಅದನ್ನು ನಂಬಬೇಡಿ ಎಂದು ಹೈದರಾಬಾದ್ ಪೊಲೀಸರು ಟ್ವೀಟ್ ಮಾಡಿದ್ದಾರೆ.