ನಾನು ತುಂಬಾ ಚಿಂತಿತಳಾಗಿದ್ದೇನೆ; ಗೃಹ ಸಚಿವರಿಗೆ ಮನವಿ ಮಾಡಿದ ತಸ್ಲೀಮಾ ನಸ್ರೀನ್

0
200

ಸನ್ಮಾರ್ಗ ವಾರ್ತೆ

ನವದೆಹಲಿ : ಬಾಂಗ್ಲಾದೇಶ ಲೇಖಕಿ ತಸ್ಲೀಮಾ ನಸ್ರೀನ್ ಭಾರತದಲ್ಲಿ ತಮ್ಮ ನಿವಾಸದ ಬಗ್ಗೆ ಚಿಂತಿತರಾಗಿದ್ದು, ಈ ಸಂಬಂಧ ಸೋಮವಾರ ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

“ನಾನು ತುಂಬಾ ಚಿಂತಿತಳಾಗಿದ್ದೇನೆ, ನೀವು ನನಗೆ ಅವಕಾಶ ನೀಡಿದರೆ ನಾನು ನಿಮಗೆ ತುಂಬಾ ಕೃತಜ್ಞರಾಗಿರುತ್ತೇನೆ” ಎಂದು ಅವರು ಬರೆದಿದ್ದಾರೆ.

ತಸ್ಲೀಮಾ ನಸ್ರೀನ್ ತನ್ನ ಬರಹ, ಕಾದಂಬರಿಗಳಿಂದ 1990 ರ ದಶಕದ ಆರಂಭದಲ್ಲಿ ಬಹಳ ಪ್ರಸಿದ್ಧರಾಗಿದ್ದರು. ತನ್ನ ಬರಹಗಳಲ್ಲಿ ಅವರು ‘ಧರ್ಮಗಳು ಮಹಿಳಾ ವಿರೋಧಿ’ ಎಂದು ‘ಧರ್ಮ’ಗಳನ್ನು ಟೀಕಿಸಿದರು.

ನಸ್ರೀನ್ 1994 ರಿಂದ ದೇಶಭ್ರಷ್ಟರಾಗಿದ್ದಾರೆ. ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ವಾಸಿಸಿದ ನಂತರ, ಅವರು 2004 ರಲ್ಲಿ ಭಾರತಕ್ಕೆ ಬಂದು ನೆಲೆಸಿದರು.

1994ರಲ್ಲಿ ತಸ್ಲೀಮಾ ನಸ್ರೀನ್ ಅವರ ಕಾದಂಬರಿ ‘ಲಜ್ಜಾ’ ಜಗತ್ತಿನಾದ್ಯಂತ ವಿವಾದಕ್ಕೀಡಾಗಿತ್ತು.

ಈ ಪುಸ್ತಕವನ್ನು ಮೊದಲು 1993 ರಲ್ಲಿ ಬಂಗಾಳಿ ಭಾಷೆಯಲ್ಲಿ ಪ್ರಕಟಿಸಲಾಯಿತು. ನಂತರ ಬಾಂಗ್ಲಾದೇಶದಲ್ಲಿ ಆ ಕೃತಿಯನ್ನು ನಿಷೇಧಿಸಲಾಯಿತು. ಲೇಖಕಿಗೆ ಕೊಲೆ ಬೆದರಿಕೆಗಳು ಬರಲಾರಂಭಿಸಿದ್ದು, ಇದರಿಂದಾಗಿ ದೇಶ ತೊರೆಯುವಂತೆ ಒತ್ತಾಯಿಸಲಾಗಿದೆ ಎಂದು ಹೇಳಲಾಗಿದೆ.