✍️ ಡಾ. ಆಯಿಶಾ ಫಿದಾ
ಫಿಸಿಯೋಥೆರಪಿಸ್ಟ್ ಮತ್ತು OB-GYN, ಮಂಗಳೂರು
ಸಂದರ್ಶನ
ಪ್ರಶ್ನೆ: ಒಬ್ಬ ಯುವತಿಯಾಗಿ ನಿಮ್ಮ ಕಣ್ಣಮುಂದಿನ ಭಾರತ ಹೇಗಿದೆ?
ಉತ್ತರ: ನಾನು ನೋಡ್ತಿರೋ ಇಂಡಿಯಾ ಸಕ್ಕತ್ ವೈಬ್ರೆಂಟಾಗಿದೆ, ಇಲ್ಲಿ ಹೋಪ್ ಮತ್ತೆ ಲೈಫ್ ಎರಡೂ ಜಾಸ್ತಿ ಇದೆ. ಸೋಷಿಯಲ್ ಮೀಡಿಯಾ ಮತ್ತೆ ಬೇರೆ ಪ್ಲಾಟ್‌ಫಾರ್ಮ್‌ಗಳ ಮೂಲಕ ಯಂಗ್‌ಸ್ಟರ್ಸ್ ಹಾಗೂ ಎಲ್ಡರ್ಸ್ ಎದುರಿಸ್ತಿರೋ ಪ್ರಾಬ್ಲಮ್ಸ್ ಬಗ್ಗೆ ಅವೇರ್ನೆಸ್ ಬರ್ತಿರೋದ್ರಿಂದ ಇಂಡಿಯಾ ಇನ್ನು ಹೆಚ್ಚು ಲಿವೇಬಲ್ ಆಗ್ತಿದೆ. ಜೊತೆಗೆ ಯೂತ್ ಕೂಡ ಸ್ವಲ್ಪ ಮಟ್ಟಿಗೆ ರೆಸ್ಪಾನ್ಸಿಬಲ್ ಆಗ್ತಿದ್ದಾರೆ.
ಪ್ರಶ್ನೆ: ಇಂದಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ಭಾರತದ ವಿವಿಧ ಸಂಸ್ಕೃತಿಗಳನ್ನು ನೀವು ಹೇಗೆ ಅರ್ಥೈಸಿಕೊಳ್ಳುತ್ತೀರಿ?
ಉತ್ತರ: ಸೋಷಿಯಲ್ ಮೀಡಿಯಾ ಡಿಫರೆಂಟ್ ಜನರೇಷನ್ಸ್ ನಡುವೆ ಇರೋ ಕಲ್ಚರಲ್ ಗ್ಯಾಪ್‌ಗಳು, ಬೇರೆ ಬೇರೆ ನಂಬಿಕೆಗಳು ಮತ್ತೆ ಥಾಟ್ಸ್‌ನ ಬ್ರಿಡ್ಜ್ ಮಾಡ್ತಿದೆ. ಹಿಂದಿನ ಜನ ರೇಷನ್‌ಗೆ ಉತ್ತರ ಇರದಿದ್ದ ಎಷ್ಟೋ ಪ್ರಶ್ನೆಗಳಿಗೆ ಸೋಷಿಯಲ್ ಮೀಡಿಯಾ ಈಗ ಮೀಡಿಯೇಟರ್ ಆಗಿ ಆನ್ಸರ್ ಕೊಡ್ತಿದೆ. ಇದು ವೈವಿಧ್ಯತೆನ ಅಕ್ಸೆಪ್ಟ್ ಮಾಡ್ಕೊಳ್ಳೋಕೆ ಹೆಲ್ಪ್ ಮಾಡ್ತಿದೆ.
ಪ್ರಶ್ನೆ: ನಿಮಗೆ ವೈಯಕ್ತಿಕ ಸ್ವಾತಂತ್ರ್ಯ'(ಉದಾಹರಣೆಗೆ ಶಿಕ್ಷಣ, ವೃತ್ತಿ ಅಥವಾ ಉಡುಪು) ಮುಖ್ಯವೋ ಅಥವಾರಾಷ್ಟ್ರೀಯ ಹಿತಾ ಸಕ್ತಿ’ ಮುಖ್ಯವೋ? ಇವೆರಡನ್ನೂ ಬ್ಯಾಲೆನ್ಸ್ ಮಾಡುವುದು ಹೇಗೆ?
ಉತ್ತರ: ನನಗೆ ಎರಡನ್ನೂ ಸಪರೇಟ್ ಮಾಡೋಕೆ ಆಗಲ್ಲ, ಎರಡು ಕೂಡ ಇಂಪಾಟೆಂಟ್. ನನ್ನ ಪ್ರಕಾರ ಪರ್ಸನಲ್ ಪ್ಯಾಶನ್ಸ್ ಮತ್ತೆ ಕೆರಿಯರ್ ಮೇಲೆ ವರ್ಕ್ ಮಾಡೋದು ಎಷ್ಟು ಅಗತ್ಯವೋ, ಅದು ಸೊಸೈಟಿ ಮೇಲೂ ಅಷ್ಟೇ ಇಂಪ್ಯಾಕ್ಟ್ ಮಾಡುತ್ತೆ. ಯಂಗ್ ಮತ್ತೆ ಎನರ್ಜೆಟಿಕ್ ಆಗಿರೋ ಯೂತ್‌ಗೆ ದೇಶದ ಇಶ್ಯೂಗಳ ಬಗ್ಗೆ ಜೆನ್ಯೂನ್ ಇಂಟರೆಸ್ಟ್ ಇರಬೇಕು, ಮತ್ತೆ ಪ್ರತಿಯೊಂದು ಮ್ಯಾಟರ್‌ನಲ್ಲೂ ತಮ್ಮದೇ ಆದ ಸ್ಟ್ಯಾಂಡ್ ತಗೊಳ್ಳೋ ಕೆಪಾಸಿಟಿ ಇರಬೇಕು. ಯಾವಾಗಲೂ ಸತ್ಯ ಏನು ಅಂತ ನೋಡೋಕೆ ರೆಡಿಯಿರಬೇಕು ಮತ್ತೆ `ಸೆಲೆಕ್ಟಿವ್ ಆಕ್ಟಿವಿಸಂ’ನ ಅವಾಯ್ಡ್ ಮಾಡಬೇಕು.
ಪ್ರಶ್ನೆ: ಡಿಜಿಟಲ್ ಕ್ರಾಂತಿಯು ಹೆಣ್ಣುಮಕ್ಕಳ ಆರ್ಥಿಕ ಸ್ವಾವಲಂಬನೆಗೆ (ಸಬಲೀಕರಣಕ್ಕೆ (Work from home, Online business ಇತ್ಯಾದಿ) ಎಷ್ಟು ದಾರಿ ಮಾಡಿಕೊಟ್ಟಿದೆ?
ಉತ್ತರ: ಹುಡ್ಗೀರು ಈಗ ಆಲ್ಮೋಸ್ಟ್ ಎಲ್ಲಾ ಫೀಲ್ಡ್‌ನಲ್ಲೂ ಮಾಸ್ಟರ್ಸ್ ಆಗಿದ್ದಾರೆ. ಇದರಿಂದಾಗಿ ಎಷ್ಟೋ ಜನರಿಗೆ ಫೈನಾನ್ಶಿಯಲ್ ಇಂಡಿಪೆಂಡೆನ್ಸ್ ಸಿಕ್ಕಿದೆ. ಇನ್ನು ಕೆಲವರಂತೂ ಅವರ ಮನೆಗೆ ಸೋಲ್ ಬ್ರೆಡ್‌ವಿನ್ನರ್ ಕೂಡ ಆಗಿದ್ದಾರೆ. ಈ ಪ್ಲಾಟ್‌ಫಾರ್ಮ್‌ಗಳು ಹುಡ್ಗೀರಿಗೆ ಫಿಂಗರ್‌ಟಿಪ್ಸ್‌ನಲ್ಲೇ ಆಪರ್ಚುನಿಟಿಗಳನ್ನ ಕೊಟ್ಟಿವೆ, ಮತ್ತೆ ಅವರು ಅಂದುಕೊಂಡಿದ್ದನ್ನ ಅಚೀವ್ ಮಾಡೋಕೆ ಒಂದು ಎಕ್ಸ್ಟ್ರಾ ವಿಂಗ್ಸ್ ಸಿಕ್ಕಂತಾಗಿದೆ.
ಪ್ರಶ್ನೆ: ಸಂವಿಧಾನ ನೀಡಿರುವ ಸಮಾನತೆ' ಇಂದಿನ ಯುವತಿಯರ ಜೀವನದಲ್ಲಿ ನಿಜವಾಗಿಯೂ ಜಾರಿಗೆ ಬಂದಿದೆಯೇ? ಸಂವಿಧಾನದ ಮೌಲ್ಯಗಳು ನಿಮ್ಮ ತಲೆಮಾರಿನ ಹೆಣ್ಣುಮಕ್ಕಳಿಗೆ ಎಷ್ಟು ಧೈರ್ಯ ನೀಡುತ್ತವೆ?
ಉತ್ತರ: ಮೇಜರ್ ಸಿಟಿಗಳಲ್ಲಿ ಇದಕ್ಕೆಹೌದು’ ಅಂತ ಹೇಳಬಹುದು, ಆದ್ರೆ ಇವತ್ತಿಗೂ ವುಮೆನ್ಸ್ಗೆ ಬೇಸಿಕ್ ರೈಟ್ಸ್ ಸಿಗದ ಎಷ್ಟೋ ಜಾಗಗಳಿವೆ. ರೈಟ್ಸ್ ಮತ್ತೆ ಈಕ್ವಾಲಿಟಿ ಬಗ್ಗೆ ಇರೋ ನಾಲೆಡ್ಜ್ ಮತ್ತೆ ಅವೇರ್ನೆಸ್ ಈಗಿನ ಹುಡ್ಗೀರ ಲೈಫ್ ಚೇಂಜ್ ಮಾಡಿದೆ. ಮುಂಚೆನೂ ಕಾನೂನು ಮತ್ತೆ ನಿಯಮಗಳು ಇತ್ತು, ಆದ್ರೆ ಆಗ ಹುಡ್ಗೀರಿಗೆ ಅದರ ಬಗ್ಗೆ ಜಾಸ್ತಿ ಐಡಿಯಾ ಇರಲಿಲ್ಲ. ಮತ್ತೆ ಯಾವುದಕ್ಕೂ ಧ್ವನಿ ಎತ್ತೋಕೆ ಹೆಸಿಟೇಟ್ ಮಾಡ್ತಿದ್ರು. ಆದ್ರೆ ಈಗ ಬೇರೆ ಬೇರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವಿಷಯದ ಬಗ್ಗೆ ನಡೀತಿರೋ ಡಿಸ್ಕೋರ್ಸ್‌ಗಳು ಹುಡ್ಗೀರಿಗೆ ತಮಗೋಸ್ಕರ ನಿಲ್ಲೋ ಧೈರ್ಯ ಕೊಟ್ಟಿದೆ, ಅದಕ್ಕೇ ಈ ಜನರೇಷನ್ ಸ್ವಲ್ಪ ಜಾಸ್ತಿನೇ ಕಾನ್ಫಿಡೆಂಟ್ ಆಗಿದೆ.
ಪ್ರಶ್ನೆ: ಇಂದು ಭಾರತದ ಯುವತಿಯರ ಮುಂದಿರುವ ಅತಿದೊಡ್ಡ ಸವಾಲು ಯಾವುದು?
ಉತ್ತರ: ಒಟ್ಟೊಟ್ಟಿಗೆ ಫ್ಯಾಮಿಲಿ ರೆಸ್ಪಾನ್ಸಿಬಿ ಲಿಟಿ, ಸಮಾಜದ ಎಕ್ಸ್ಪೆಕ್ಟೇಷನ್ಸ್, ವರ್ಕ್ ಲೈಫ್ ಬ್ಯಾಲೆನ್ಸ್ ಮತ್ತೆ ಬೆಳೆಯುತ್ತಿರೋ ಟ್ರೆಂಡ್ಸ್ – ಹೀಗೆ ಎಲ್ಲವನ್ನೂ ಬ್ಯಾಲೆನ್ಸ್ ಮಾಡೋದು ಸಕ್ಕತ್ ಟಫ್. ಫ್ಯಾಮಿಲಿ ಬೆಳೆಸುತ್ತಲೇ ಕೆರಿಯರ್ ಮತ್ತೆ ಅಚೀವ್ ಮೆಂಟ್ಸ್ ವಿಷಯದಲ್ಲಿ ಎಲ್ಲೂ ಸ್ಲೋ ಆಗಬಾರದು ಅಥವಾ ಯಾವುದನ್ನೂ ಮಿಸ್ ಮಾಡ್ಕೋಬಾರದು ಅನ್ನೋ ಎಕ್ಸ್ಪೆಕ್ಟೇಷನ್ ಇದ್ದಾಗ ಇದು ಇನ್ನೂ ಚಾಲೆಂಜಿಂಗ್ ಅನ್ಸುತ್ತೆ. ಇನ್ನೊಂದು ದೊಡ್ಡ ಇಶ್ಯೂ ಅಂದ್ರೆ ಸೇಫ್ಟಿ ಕನ್ಸರ್ನ್ಸ್. ಎಲ್ಲಾ ಫೀಲ್ಡ್‌ನಲ್ಲೂ ಇಷ್ಟೊಂದು ಅಡ್ವಾನ್ಸ್ ಮೆಂಟ್ಸ್ ಆಗಿದ್ರೂ, ಹುಡ್ಗೀರಿಗೆ ಯಾವುದೇ ವರಿ ಇಲ್ಲದೆ ಓಡಾಡೋ ಎನ್ವಿರಾನ್ ಮೆಂಟ್ ಕ್ರಿಯೇಟ್ ಮಾಡೋದ್ರಲ್ಲಿ ಇಂಡಿಯಾ ಈಗಲೂ ಫೇಲ್ ಆಗ್ತಿದೆ.
ಪ್ರಶ್ನೆ: ನೀವು ಕನಸು ಕಾಣುವ ಭವಿಷ್ಯದ ಭಾರತ ಹೇಗಿರಬೇಕು? ನಿಮ್ಮಐಡಿಯಾ ಆಫ್ ಇಂಡಿಯಾ ಏನು?
ಉತ್ತರ: ಫ್ಯೂಚರ್ ಇಂಡಿಯಾ ಎಲ್ಲರನ್ನೂ ಅಕ್ಸೆಪ್ಟ್ ಮಾಡ್ಕೊಳ್ಳೋ ತರಹ ಮತ್ತೆ ಸಕ್ಕತ್ ಅಪೀಲಿಂಗ್ ಆಗಿ ಇರಬೇಕು. ಮೆನ್ ಮತ್ತೆ ವುಮೆನ್ ನಡುವೆ ಈಕ್ವಾಲಿಟಿಗಿಂತ `ಈಕ್ವಿಟಿ’ (Equity) ಜಾಸ್ತಿ ಇರ ಬೇಕು. ಈಗಿನ ಇಂಡಿಯಾ ವುಮೆನ್‌ಗೆ ಇಂಡಿಪೆಂಡೆಂಟ್ ಆಗಿರೋದು ಹೇಗೆ ಅಂತ ಹೇಳಿಕೊಟ್ಟಿದೆ, ಹಾಗೆಯೇ ಫ್ಯೂಚರ್ ಇಂಡಿಯಾ ಮೆನ್‌ಗೆ ಇನ್ನಷ್ಟು ಕನ್ಸಿಡರೇಟ್ ಆಗಿರೋದು ಮತ್ತೆ ಅಕ್ಸೆಪ್ಟ್ ಮಾಡ್ಕೊಳ್ಳೋ ದನ್ನ ಕಲಿಸಿಕೊಡಬೇಕು. ಹುಡ್ಗೀರು ತಮ್ಮ ಥಾಟ್ಸ್ ಮತ್ತೆ ಒಪಿನಿಯನ್ಸ್ನ ಪ್ರತಿ ಯೊಂದು ಸ್ಪೇಸ್‌ನಲ್ಲೂ ಫ್ರೀಯಾಗಿ ಹೇಳೋಕೆ ಆಗಬೇಕು. ಸ್ವಂತ ದೇಶದಲ್ಲೇ ಹುಡ್ಗೀರಿಗೆ ಫುಲ್ ಸೇಫ್ ಮತ್ತೆ ಸೆಕ್ಯೂರ್ ಆಗಿರೋ ಫೀಲ್ ಸಿಗಬೇಕು.
(14 ರಿಂದ 29 ವರ್ಷದೊಳಗಿನವರನ್ನು ಜೆನ್‌ಝಿ ಎಂದು ಕರೆಯಲಾಗುತ್ತದೆ.)












