ಅಗತ್ಯವಾದರೆ ಟರ್ಕಿಯ ವಿರುದ್ಧ ಸೈನಿಕ ಕಾರ್ಯಾಚರಣೆಗೆ ಸಿದ್ಧ: ಡೊನಾಲ್ಡ್ ಟ್ರಂಪ್

0
583

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್,ಅ.23: ಟರ್ಕಿಯ ವಿರುದ್ಧ ಯುದ್ಧ ಮಾಡುವ ಅಗತ್ಯ ಸೃಷ್ಟಿಯಾದರೆ ಅದಕ್ಕೂ ಸಿದ್ಧ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕದ ಅಟಾರ್ನಿ ಮೈಕ್‍ ಪೊಂಪಿಯೊ ಸಿಎನ್‍ಬಿಸಿ ಚ್ಯಾನೆಲ್ ನಡೆಸಿದ ಸಂದರ್ಶನದಲ್ಲಿ ಈ ವಿವವರನ್ನು ಬಹಿರಂಗಪಡಿಸಿದ್ದಾರೆ.

ಯುದ್ಧದಲ್ಲಿ ಶಾಂತಿಗೆ ಆದ್ಯತೆ ಕೊಡುತ್ತೇವೆ. ಆದರೆ ಟರ್ಕಿ ಹಠ ಹಿಡಿದರೆ ಅದರ ವಿರುದ್ಧ ಒಂದು ಹಂತದಲ್ಲಿ ಯುದ್ಧ ಅನಿವಾರ್ಯ ಎಂಬ ಘಟ್ಟಕ್ಕೆ ತಲುಪಿದರೆ ಅದಕ್ಕೂ ಸಿದ್ಧ ಎಂದು ಟ್ರಂಪ್ ತಿಳಿಸಿದರೆಂದು ಅವರು ಸಂದರ್ಶನದ ವೇಳೆ ಹೇಳಿದರು.

ಸಿರಿಯದಲ್ಲಿ ಟರ್ಕಿ ಅಕ್ಟೋಬರ್ ಒಂಬತ್ತರಂದು ಸೈನಿಕ ಕಾರ್ಯಾಚರಣೆ ಆರಂಭಿಸಿತ್ತು. ಕುರ್ದ‌್‌ಗಳ ಮೇಲೆ ಟರ್ಕಿ ದಾಳಿ ನಡೆಸುತ್ತಿದೆ. ತನ್ನ ಗಡಿಭಾಗದಿಂದ ಕುರ್ದ್‌ಗಳನ್ನು ದೂರ ಸರಿಸುವುದು ಟರ್ಕಿಯ ಕಾರ್ಯಾಚರಣೆಯ ಉದ್ದೇಶವಾಗಿದೆ. ಕುರ್ದಿ ಸ್ವತಂತ್ರವಾದಿಗಳನ್ನು ಟರ್ಕಿ ಭಯೋತ್ಪಾದಕರೆಂದು ಕರೆಯುತ್ತಿದೆ. ಇತ್ತೀಚೆಗೆ ಅಮೆರಿಕ ಉಪಾಧ್ಯಕ್ಷರ ನೇತೃತ್ವದಲ್ಲಿ ಟರ್ಕಿ ಅಧ್ಯಕ್ಷರ ಜೊತೆ ಯುದ್ಧ ವಿರಾಮದ ಕುರಿತು ಚರ್ಚೆ ನಡೆದಿತ್ತು. ಈ ಒಪ್ಪಂದ ಪ್ರಕಾರ ಟರ್ಕಿ 120 ಗಂಟೆವರೆಗೆ ಸಿರಿಯದಲ್ಲಿರುತ್ತದೆ. ಈ ಸಮದಯಲ್ಲಿ ಕುರ್ದಿಗಳು ಟರ್ಕಿ ಗಡಿಯಿಂದ 30 ಕಿಲೊಮೀಟರ್ ದೂರ ಸರಿಯಬೇಕಾಗಿದೆ ಎಂದು ತಿಳಿಸಲಾಗಿತ್ತು.