ಬಿಹಾರದಲ್ಲಿ ಅನಧಿಕೃತ ಮರಳುಗಾರಿಕೆ ವಿರೋಧಿಸಿ ಪ್ರತಿಭಟನೆ: ಮಹಿಳೆಯರಿಗೆ ಕೈ ಕೋಳ ತೊಡಿಸಿದ ಅಧಿಕಾರಿಗಳು…!

0
258

ಸನ್ಮಾರ್ಗ ವಾರ್ತೆ

ಗಯಾ: ಅನಧಿಕೃತ ಮರಳುಗಾರಿಕೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ ಮಹಿಳೆಯರ ಕೈಗಳಿಗೆ ಕೋಳ ತೊಡಿಸಿರುವ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇದು ಬಿಹಾರದ ಗಯಾ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಡೆಸಲು ಅಧಿಕಾರಿಗಳು ಏಲಂ ಮಾಡುತ್ತಿದ್ದಾಗ ಕೆಲವು ಗ್ರಾಮಸ್ಥರು ವೇದಿಕೆಗೇರಿ ಪ್ರತಿಭಟಿಸತೊಡಗಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಪೊಲೀಸರು ಬಲ ಪ್ರಯೋಗಿಸಲು ನೋಡಿದಾಗ ಪರಿಸ್ಥಿತಿ ಹತೋಟಿ ಮೀರಿತು.

ಪ್ರತಿಭಟನಾಕಾರರು ಪೊಲೀಸರಿಗೆ ಕಲ್ಲು ಹೊಡೆದರು ಎಂದು ಆರೋಪಿಸಿ ಪೊಲೀಸರು, ಗುಂಪನ್ನು ಚದುರಿಸಲು ಅಶ್ರುವಾಯುವನ್ನು ಸಿಡಿಸಿದ್ದಾರೆ. ಇದರಿಂದ ಹಲವು ಮಂದಿ ಗಾಯಗೊಂಡಿದ್ದಾರೆ. ಬಳಿಕ ಗ್ರಾಮದ ಮಹಿಳೆಯರನ್ನು ಸೇರಿ ಕೆಲ ಪುರುಷರ ಕೈಯನ್ನು ಹಿಂಬದಿ ಕಟ್ಟಿ ನೆಲದಲ್ಲಿ ಕುಳಿತುಕೊಳ್ಳಿಸಿರುವ ವೀಡಿಯೋವೊಂದು ಸದ್ಯ ವೈರಲ್ ಆದ ಬಳಿಕ ಪೋಲೀಸರ ನಡೆಯ ವಿರುದ್ಧ ಆಕ್ರೋಶ
ವ್ಯಕ್ತವಾಗಿದೆ.

ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆಯನ್ನು ನಿಭಾಯಿಸಲು, ಬಿಹಾರ ರಾಜ್ಯ ಗಣಿಗಾರಿಕೆ ನಿಗಮವು ಈ ತಿಂಗಳ ಆರಂಭದಲ್ಲಿ ಎಲ್ಲಾ ಮರಳು ಗಣಿಗಾರಿಕೆ ಸೈಟ್‌ಗಳ ಪರಿಸರ ಲೆಕ್ಕ ಪರಿಶೋಧನೆಯನ್ನು ನಡೆಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಮಧ್ಯೆ ಕೆಲವು ಖಾಸಗಿ ಸಂಸ್ಥೆಗಳು ಮರಳು ದಡಗಳನ್ನು ಪರಿಶೀಲಿಸಲು ವಿವಿಧ ತಂತ್ರಜ್ಞಾನ ಮತ್ತು ಡ್ರೋನ್‌ಗಳನ್ನು ಬಳಸುತ್ತಿರುವ ಬಗ್ಗೆ ತಿಳಿದು ಬಂದಿದೆ.