ಭಾರತದಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತ- ಐಎಂಎಫ್

0
837

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಫೆ. 1: ಭಾರತದಲ್ಲಿ 2019ರಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ ಎಂದು ಐಎಂಎಫ್ ಮ್ಯಾನೇಜಿಂಗ್ ಡೈರಕ್ಟರ್ ಕ್ರಿಸ್ಟಲಿನಾ ಜಾರ್ಜಿಯೇವ ಹೇಳಿದ್ದಾರೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಸಮಸ್ಯೆ ದೇಶವನ್ನು ಬಿಕ್ಕಟ್ಟಿಗೆ ದೂಡುತ್ತಿದೆ. ಆದರೆ, ಭಾರತದಲ್ಲಿ ಮಾಂದ್ಯ ಪರಿಸ್ಥಿತಿ ಇಲ್ಲ ಎಂದು ಐಎಂಎಫ್ ಹೇಳಿದೆ. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಒಟ್ಟು ಕೊರತೆ ಆಗಿದೆ. ಕಳೆದ ವರ್ಷ ಭಾರತದ ಬೆಳವಣಿಗೆ ದರ ಶೇ. ನಾಲ್ಕುಆಗಿತ್ತು. ಮುಂದಿನ ವರ್ಷ 5.8 ಶೇಕಡಕ್ಕೆ ಬೆಳವಣಿಗೆ ದರ ಇರಲಿದ್ದು, 2021ರಲ್ಲಿ ಶೇ. 6.5ಕ್ಕೆ ಏರಲಿದೆ ಎಂದು ಐಎಂಎಫ್ ಹೇಳುತ್ತಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಸಮಸ್ಯೆಯು ಈ ಸಮಸ್ಯೆಗೆ ಪ್ರಧಾನ ಕಾರಣವೆಂದು ಐಎಂಎಫ್ ಮ್ಯಾನೇಜಿಂಗ್ ಡೈರೆಕ್ಟರ್ ಹೇಳಿದರು.