ಸನ್ಮಾರ್ಗ ವಾರ್ತೆ
ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ, ಇಮ್ರಾನ್ ಖಾನ್ ಅವರನ್ನು ರಾವಲ್ ಪಿಂಡಿಯ ಜೈಲಿನಲ್ಲಿ ವಿಶೇಷ ಚಿಕಿತ್ಸೆಗಾಗಿ ಆಸ್ಪತ್ರೆಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಅವರ ಆರೋಗ್ಯದ ಬಗ್ಗೆ ಗಂಭೀರ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಆದರೆ ಸರ್ಕಾರ ಈ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಆದರೆ ಸುಪ್ರೀಂ ಕೋರ್ಟ್ ಇಮ್ರಾನ್ ಖಾನ್ ಅವರನ್ನು 48 ಗಂಟೆಗಳ ಒಳಗೆ ಶಿಫಾ ಅಂತರಾಷ್ಟ್ರೀಯ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಆದೇಶಿಸಿತು. ಅವರು ಸೆಪ್ಟೆಂಬರ್ 16ರವರೆಗೆ ಆಸ್ಪತ್ರೆಯಲ್ಲಿ ಇರುತ್ತಾರೆ. ಇಮ್ರಾನ್ ಖಾನ್ ಅವರ ಆರೋಗ್ಯವನ್ನು ನಿರ್ಣಯಿಸಲು ಅವರ ವೈಯಕ್ತಿಕ ವೈದ್ಯರು ಮತ್ತು ಸಹೋದರಿ ಡಾಕ್ಟರ್ ಅಲೀಮಾ ಖಾನ್ ಅವರನ್ನು ಒಳಗೊಂಡ ವಿಶೇಷ ವೈದ್ಯಕೀಯ ಮಂಡಳಿಯನ್ನು ರಚಿಸಲಾಗುವುದು.
ಇಮ್ರಾನ್ ಖಾನ್ ಅವರ ಆರೋಗ್ಯ ತೃಪ್ತಿಕರವಾಗಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದರು. ಆದರೆ ಇದನ್ನು ಕುಟುಂಬ ಮತ್ತು ಪಕ್ಷವು ಸಂಪೂರ್ಣವಾಗಿ ನಿರಾಕರಿಸಿತ್ತು. 73 ವರ್ಷದ ಇಮ್ರಾನ್ ಖಾನ್ ಅವರ ದೃಷ್ಟಿ ಗಮನಾರ್ಹವಾಗಿ ಸುಧಾರಿಸಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದರು. ಆದರೆ ತಿಂಗಳ ಹಿಂದೆ ಇಮ್ರಾನ್ ಖಾನ್ ಅವರ ವಕೀಲರು ಸುಪ್ರೀಂ ಕೋರ್ಟಿಗೆ ನೀಡಿದ ದಾಖಲೆಗಳಲ್ಲಿ ಅವರ ಬಲಗಣ್ಣಿನ ದೃಷ್ಟಿ 85% ಕುಸಿದಿದೆ ಎಂದು ವ್ಯಕ್ತವಾಗಿತ್ತು.












