ಓಮನ್‍: ಇನ್ನು ವಿದೇಶಿಯರೂ ಇಲ್ಲಿ ಸ್ವಂತ ಮನೆ ಖರೀದಿಸಬಹುದು

0
3630

ಸನ್ಮಾರ್ಗ ವಾರ್ತೆ

ಮಸ್ಕತ್: ಓಮನ್‍ನಲ್ಲಿ ವಿದೇಶೀಯರು ಕೂಡ ಸ್ವಂತ ಮನೆಯನ್ನು ಖರೀದಿಸಬಹುದು. ಅದಕ್ಕೆ ಬೇಕಾದ ಸೂಕ್ತ ನಿಬಂಧನೆಗಳು ವಸತಿ, ನಗರ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದರ. ಒಮನ್‍ನಲ್ಲಿ ಕನಿಷ್ಠ ಎರಡು ವರ್ಷ ವಾಸ ವೀಸಾ ಇರುವರು 23 ವರ್ಷಕ್ಕಿಂತ ಮೇಲ್ಪಟ್ಟವರು ಬಹುಮಹಡಿಯಲ್ಲಿ ವಾಸ, ವಾಣಿಜ್ಯ ಕಟ್ಟಡಗಳಲ್ಲಿ ಗುತ್ತೆಗೆ ಮನೆಗಳನ್ನು ನೀಡಲು ಕಾನೂನು ಸಡಿಲಿಕೆ ಮಾಡಲಾಗಿದೆ. 99 ವರ್ಷಕ್ಕೆ ಗುತ್ತೆ ಇರುತ್ತದೆ.

ಮಸ್ಕತ್ ಗವರ್ನರೇಟಿನಲ್ಲಿ 45,000 ರಿಯಾಲ್, ಅದಕ್ಕಿಂತ ಮೇಲ್ಪಟ್ಟು ಮಾರಬಹುದು. ಇತರ ಗವರ್ನರೇಟ್‍ಗಳಲ್ಲಿ 35,000 ರಿಯಾಲ್‍ಗಿಂತ ಕಡಿಮೆಗೆ ಖರೀದಿಸುವಂತಿಲ್ಲ. ಮೊದಲ ಹಂತದಲ್ಲಿ ಮಸ್ಕತ್‍ನ ಬೊಷರ್, ಸೀಬ್, ಅಮಿರಾತ್‍ಗಳಲ್ಲಿ ವಿದೇಶಿಯರಿಗೆ ಪ್ಲಾಟ್ ಗುತ್ತೆಗೆ ಕೊಡುವ ವ್ಯವಸ್ಥೆ ನೀಡಲಾಗಿದೆ. ಇತರ ಗವರ್ನರೇಟ್‍ಗಳ ಬಗ್ಗೆ ನಂತರ ನಿರ್ಧರಿಸಲಾಗುವುದು.

ಓಮನ್‍ನಲ್ಲಿ ವಾಸಕ್ಕೆ ಅನುಮತಿ ಸಿಗದಿದ್ದರೆ ವಿದೇಶಿಯರಿಗೆ ಖರೀದಿಸಿದ ನಾಲ್ಕು ವರ್ಷಗಳೊಳಗೆಯೇ ಮಾರಾಟ ಮಾಡುವ ಅನುಮತಿ ಇಲ್ಲ. ಒಬ್ಬರಿಗೆ ಒಂದು ಯುನಿಟ್ ಮಾತ್ರ ಖರೀದಿಸಬಹುದು. ಆರ್ಥಿಕ ಅಗತ್ಯತೆಗಳಿಗೆ ಈ ಮನೆಗಳನ್ನು ಒತ್ತೆ ಇಡುವ ಅನುಮತಿ ಇದೆ. ಒಬ್ಬರಿಗೆ ಖರೀದಿಸುವ ಶಕ್ತಿ ಇಲ್ಲದಿದ್ದರೆ ರಕ್ತ ಸಂಬಂಧಿಗಳೊಂದಿಗೆ ಪಾಲುಗಾರಿಯಿಂದ ಖರೀದಿಸಬಹುದು. ಮಾಲಕ ಮರಣ ಹೊಂದಿದರೆ ಹಕ್ಕುದಾರನಿಗೆ ಗುತ್ತೆ ಹೋಗುತ್ತದೆ.

ಕಟ್ಟಡ ಕಟ್ಟಿ ನಾಲ್ಕು ವರ್ಷ ಹಳತು ಆಗಿರಬೇಕು. ಕನಿಷ್ಠ ನಾಲ್ಕು ಮಾಳಿಗೆ ಇರಬೇಕು. ಎರಡು ಬೆಡ್ ರೂಮ್ ಇರಬೇಕು. ಜೊತೆ ಎಲ್ಲ ಸೌಕರ್ಯಗಳು ಇರಬೇಕು. ಹೆಚ್ಚೆಂದರೆ ಬಿಲ್ಡಿಂಗ್‍ನಲ್ಲಿ ಶೇ.40ರಷ್ಟು ವಿದೇಶಿಯರಿಗೆ ಮಾರಾಟ ಮಾಡಬಹುದು. ಒಂದೇ ದೇಶದವರಿಗೆ ಹೆಚ್ಚೆಂದರೆ ಮಾರಾಟ ಮಾಡುವುದರಲ್ಲಿ ಶೇ.20ರಷ್ಟು ಪ್ಲಾಟ್‍ಗಳನ್ನು ಕೊಡಬಹುದು. ವಸತಿ ಮತ್ತು ನಗರ ವಿಕಾಸ ಸಚಿವ ಡಾ.ಖಲ್ಫಾನ್ ಅಲ್ ಶುಐಲಿ ಕಳೆದ ವರ್ಷವೇ ವಿದೇಶಿಯರಿಗೆ ಮನೆ ದೀರ್ಘಾವಧಿ ಗುತ್ತೆಗೆ ಕೊಡುವ ಯೋಜನೆಯನ್ನು ಪ್ರಕಟಿಸಿದ್ದರು.