ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ; ಕೇಂದ್ರದಿಂದ 10,900 ಕೋಟಿಯ ಯೋಜನೆ

0
111

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ.12: ಇಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಹೊಸ ಸಬ್ಸಿಡಿ ಯೋಜನೆಯನ್ನು ಕೇಂದ್ರ ಸರಕಾರ ಘೋಷಿಸಿದೆ.

ಎರಡು ವರ್ಷಕ್ಕೆ 10,900 ಕೋಟಿಯ ಯೋಜನೆ ಇದಾಗಿದ್ದು ಸಚಿವ ಸಂಪುಟದಿಂದ ಅಂಗೀಕಾರ ದೊರಕಿದೆ. ಪ್ರಧಾನಿ ಪ್ರಧಾನ್ ಮಂತ್ರಿ ಎಲೆಕ್ಟ್ರಿಕ್ ಡ್ರೈವ್ ಕ್ರಾಂತಿ (PME ಡ್ರೈವ್) ಎಂದು ಯೋಜನೆಗೆ ಹೆಸರಿಡಲಾಗಿದೆ. ಜೊತೆಗೆ ಪಿಎಂ ಇ-ಬಸ್ ಯೋಜನೆಗೆ 3435 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ಮೂರು ಚಕ್ರ ವಾಹನಗಳು ಆಂಬುಲೆನ್ಸ್‍ಗಳು, ಲಾರಿಗಳು, ಇತರ ವಿದ್ಯುತ್ ವಾಹನಗಳ ಇ-ವೈಕಲ್‍ಗಳಿಗೆ 3,679 ಕೋಟಿ ರೂಪಾಯಿ ಸಬ್ಸಿಡಿ ಸಹಿತ ಯೋಜನೆ ಇದು. 24.79 ಲಕ್ಷ ದ್ವಿಚಕ್ರ ಇಲೆಕ್ಟ್ರಿಕ್ ವಾಹನಗಳಿಗೂ 3.16 ಲಕ್ಷ ಮೂರು ಚಕ್ರ ವಾಹನಗಳಿಗೂ ಯೋಜನೆಯಲ್ಲಿ ಪ್ರಯೋಜನ ಸಿಗಲಿದೆ. ಇದೇ ವೇಳೆ ಇಲೆಕ್ಟ್ರಿಕ್ ಕಾರುಗಳು, ಹೈಬ್ರಿಡ್ ಕಾರುಗಳು ಈ ಯೋಜನೆಯಲ್ಲಿ ಒಳಗೊಂಡಿಲ್ಲ.

ಇಲೆಕ್ಟ್ರಿಕ್ ವಾಹನಳ ಚಾರ್ಜಿಂಗ್ ಸ್ಟೇಶನ್‍ಗಳನ್ನು ಸ್ಥಾಪಿಸುವ ಯೋಜನೆಯ ಭಾಗವಾಗಿ ಇಡೀ ದೇಶದಲ್ಲಿ ಇದರಂತೆ ಇಲೆಕ್ಟ್ರಿಕ್ ಕಾರುಗಳಿಗಾಗಿ 22, 100 ಫಾಸ್ಟ್ ಚಾರ್ಜಿಂಗ್ ಸ್ಟೇಶನ್‍ಗಳನ್ನು ಸ್ಥಾಪಿಸಲಾಗುವುದು. ಇಲೆಕ್ಟ್ರಿಕ್ ಬಸ್‍ಗಳಿಗಾಗಿ 1800 ಮತ್ತು ದ್ವಿಚಕ್ರ ವಾಹನಗಳಿಗಾಗಿ 48,400 ಫಾಸ್ಟ್ ಚಾರ್ಜಿಂಗ್ ಸ್ಟೇಶನ್‍ಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ 2000 ಕೋಟಿ ರೂಪಾಯಿಯನ್ನು ಮೀಸಲಿರಿಸಲಾಗಿದೆ.