ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಳಂಗಡಿಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ

0
395

ಸನ್ಮಾರ್ಗ ವಾರ್ತೆ

ಬೋಳಂಗಡಿ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ಎಸ್ಟಿಎಂಸಿ ಅಧ್ಯಕ್ಷರಾದ ಉಷಾ ಎಸ್ ರಾಜ್ ಧ್ವಜಾರೋಹಣ ಮಾಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಣದ ಪ್ರೇಮಿ ದಿನೇಶ್ ಕಾಮತ್ ಪುತ್ತೂರು ಮಾತನಾಡುತ್ತಾ “ಈ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಊರವರು ಸಂಪೂರ್ಣ ತೊಡಗಿಸಿಕೊಳ್ಳಬೇಕು ಎಂದು ಕರೆಯಿತ್ತರು.

ಮತ್ತೋರ್ವ ಮುಖ್ಯ ಅತಿಥಿ ಉದ್ಯಮಿ ಎಂಎನ್ ಕುಮಾರ್ ಮೆಲ್ಕಾರ್ ಈ ದೇಶವನ್ನು ಬ್ರಿಟಿಷರ ಆಡಳಿತದಿಂದ ಪಾರು ಮಾಡಲು ಹಲವು ಮಹನೀಯರು ತನ್ನ ಪ್ರಾಣವನ್ನ ತ್ಯಾಗ ಮಾಡಿದ್ದಾರೆ. ಅವೆಲ್ಲವನ್ನು ನಾವು ಇಂದು ಸ್ಮರಿಸಬೇಕಾಗಿದೆ. ನಮ್ಮನ್ನು ಕಾಯುವ ಯೋಧರನ್ನು ಈ ಸಂದರ್ಭದಲ್ಲಿ ಗೌರವಿಸಬೇಕಾಗಿದೆ ಎಂದು ಹೇಳಿದರು.

ಪತ್ರಕರ್ತ ಸಲೀಂ ಬೋಳಂಗಡಿ ಅವರು ಮಾತನಾಡುತ್ತಾ ಈ ದೇಶಕ್ಕಾಗಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಪ್ರಾಣ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸಿದರೆ ಸಾಲದು. ಅವರ ಕನಸನ್ನು ಸಹಕಾರ ಗೊಳಿಸಬೇಕಾದ ಸವಾಲು ನಮ್ಮ ಮುಂದಿದೆ ಎಂದರು. ಮೆಲ್ಕಾರ್ ಯುವ ಸಂಗಮದ ಅಧ್ಯಕ್ಷ ಪೂರ್ಣೇಶ್ ಆಚಾರ್ಯ, ಸ್ಥಳೀಯ ಸಮಾಜ ಸೇವಕ ಮುಕ್ತಾರ್ ಅಹಮದ್, ಶಿಕ್ಷಕಿ ಸುನಿತಾ ಚಿದಾನಂದ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದೇವದಾಸ್ ಶೆಟ್ಟಿಗಾರ್, ಕ್ರಷ್ಣ ನಾಯಕ್ ಶುಭಹಾರೈಸಿದರು. ಈ ಸಂದರ್ಭದಲ್ಲಿ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆ ಮಾರ್ ಇವರು ಗಣಕಯಂತ್ರ ಹಾಗೂ ಎಲ್ ಇಡಿ ಟಿವಿಯನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.

ಶಾಲೆಯ ಅಭಿವೃದ್ಧಿಗೆ ತನುಮನ ಧನದಿಂದ ಸಹಕರಿಸಿದ ದಾನಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಅಮ್ಮ ಬೇಕರಿ ಮಾಲಕ ಜನಾರ್ಧನ್, ಸ್ಥಳೀಯ ಉದ್ಯಮಿ ಮೊಹಮ್ಮದ್ ಬೋಳಂಗಡಿ, ಶಿವಾನಂದ ಸೇನೆರೆಬೈಲು, ಎಸ್ ಡಿ ಎಂ ಸಿ ಸದಸ್ಯ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹಾರಿಸ್ ಆಚಿ, ಸಂಘದ ಪ್ರಧಾನ ಕಾರ್ಯದರ್ಶಿ, ಸುಧಾಕರ್ ಸರ್ ಮುಂತಾದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ರಾಜೇಶ್ ವೈಎನ್ ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಚಿತ್ರಲೇಖ ಕಾರ್ಯಕ್ರಮ ನಿರೂಪಿಸಿದರೆ ವಿನಯ ಕುಮಾರಿ ಧನ್ಯವಾದವಿತ್ತರು.ಸಹ ಶಿಕ್ಷಕಿ ಅಸ್ಮತ್ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆಗೈದರು. ಎಸ್ಡಿಎಂಸಿ ಅಧ್ಯಕ್ಷೆ ಉಷಾ ಎಸ್ ರಾಜ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.