ದೇಶದಲ್ಲಿ ಕೊರೊನಾಕ್ಕೆ 507 ಮಂದಿ ಬಲಿ: ರೋಗಿಗಳ ಸಂಖ್ಯೆ 15,000

0
757

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 19: ದೇಶದಲ್ಲಿ ಕೊರೊನಾ ವೈರಸ್‍ಗೆ 15,712 ಮಂದಿ ತುತ್ತಾಗಿದ್ದಾರೆ. ಆರೋಗ್ಯ- ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆಗೊಳಿಸಿದ ಲೆಕ್ಕ ಪ್ರಕಾರ 507 ಮಂದಿ ಮೃತಪಟ್ಟಿದ್ದಾರೆ. 2,231 ಮಂದಿ ರೋಗ ಮುಕ್ತರಾಗಿದ್ದಾರೆ. 12,974 ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಅತೀಹೆಚ್ಚು 3651 ಕೊರೊನಾ ರೋಗಿಗಳಿದ್ದಾರೆ. ಇವರಲ್ಲಿ 211 ಮಂದಿ ಮೃತಪಟ್ಟಿದ್ದಾರೆ. ದಿಲ್ಲಿಗೆ ಎರಡನೆ ಸ್ಥಾನವಿದ್ದು ಇಲ್ಲಿ 1893 ಕೊರೊನಾ ರೋಗಿಗಳಿದ್ದಾರೆ. 42 ಮಂದಿ ಮೃತಪಟ್ಟು 72 ಮಂದಿ ಗುಣಮುಖರಾಗಿದ್ದಾರೆ.

ತಮಿಳ್ನಾಡಿನಲ್ಲಿ 1372 ಮಂದಿ ಕೊರೊನ ರೋಗಿಗಳಿದ್ದು ರಾಜಸ್ತಾನದಲ್ಲಿ 1,351ಮಂದಿಯಲ್ಲಿ ರೋಗ ದೃಢಪಟ್ಟಿದೆ.
ಮಧ್ಯಪ್ರದೇಶದಲ್ಲಿ 1,407 ಮಂದಿ ರೋಗ ಪೀಡಿತರಾಗಿದ್ದಾರೆ. ಇವರಲ್ಲಿ127 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಉತ್ತರಪ್ರದೇಶದಲ್ಲಿ 805 ಮಂದಿ ಕೊರೊನಾ ರೋಗಿಗಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.