ನಿರಂತರ ಎರಡನೇ ದಿನವೂ ನಾಲ್ಕು ಲಕ್ಷ ಮೀರಿದ ಕೊರೋನ ಕೇಸ್: 4000ಕ್ಕೂ ಹೆಚ್ಚು ಮಂದಿ ಸಾವು

0
152

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಾರತದಲ್ಲಿ ಕೊರೋನ ಎರಡನೇ ಅಲೆಯು ತೀಕ್ಷ್ಣರೂಪಕ್ಕೆ ಹೊರಳಿದ್ದು ರೋಗಿಗಳ ಸಂಖ್ಯೆ ನಿರಂತರ ಎರಡನೇ ದಿನವೂ ನಾಲ್ಕು ಲಕ್ಷ ದಾಟಿದೆ. ಸಾವಿನ ಸಂಖ್ಯೆ ಅತಿವೇಗ ನಾಲ್ಕು ಸಾವಿರ ಮಂದಿಯನ್ನು ತಲುಪುತ್ತಿದೆ. ಕಳೆದ ದಿನ ದೇಶದಲ್ಲಿ 4, 14,188 ಮಂದಿಗೆ ಕೊರೊನ ದೃಢಪಟ್ಟಿದ್ದು. 3,31,507 ಮಂದಿ ರೋಗದಿಂದ ಮುಕ್ತರಾಗಿದ್ದರು.

ಈವರೆಗೆ 2,14,91,598 ಮಂದಿಗೆ ಕೊರೋನ ಬಂದಿದೆ. 1,76,12,351ಂ ಮಂದಿ ಗುಣಮುಖರಾಗಿದ್ದಾರೆ. 3,915 ಮಂದಿ ಕೊರೊನ ವೈರಸ್‍ನಿಂದ ಮೃತಪಟ್ಟಿದ್ದಾರೆ. ಒಟ್ಟು 2,34,083 ಮಂದಿ ಮೃತಪಟ್ಟಂತಾಗಿದ್ದು 36,45,164 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ ಎಂದು ವರದಿ ತಿಳಿಸಿದೆ.

16,49,73,058 ಮಂದಿಗೆ ಇದುವರೆಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದು ಅದು ಹೊರಡಿಸಿದ ಇತ್ತೀಚೆಗಿನ ಹೊಸ ಲೆಕ್ಕ. ಇದೇ ವೇಳೆ ವ್ಯಾಕ್ಸಿನೇಶನ್ ತ್ವರಿತಗತಿಯಲ್ಲಿ ಮಾಡಲು ಕೇಂದ್ರ ಸರಕಾರ ಹೊರಟಿದೆ. ರಷ್ಯದ ಸ್ಫುಟ್ನಿಕ್ ವ್ಯಾಕ್ಸಿನ್ ವಿತರಣೆ ಮುಂದಿನ ವಾರದಿಂದ ರಾಜ್ಯದಲ್ಲಿ ಆರಂಭಿಸಲಾಗುವುದು ಎಂದು ಸರಕಾರ ತಿಳಿಸಿದೆ.