ಇಂಡಿಯಾ ಮಣಿಪುರಕ್ಕೆ

0
419

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜು.ಪ್ರತಿಪಕ್ಷಗಳ ಕೂಟ ಇಂಡಿಯಾದ ಹದಿನಾರು ಪಾರ್ಟಿಗಳ ನಾಯಕರು ಶನಿವಾರ ಮತ್ತು ರವಿವಾರದಲ್ಲಿ ಮಣಿಪುರಕ್ಕೆ ತೆರಳಲಿದ್ದು ಜನರನ್ನು ಸಂತೈಸಲಿದೆ. ಮಣಿಪುರದಲ್ಲಿ ಮೂರು ತಿಂಗಳಿನಿಂದ ಗಲಭೆ ನಡೆಯುತ್ತಿದೆ. ಅಲ್ಲಿನ ಸ್ಥಿತಿಗತಿಗಳನ್ನು ನೇರವಾಗಿ ಅರ್ಥಮಾಡಿಕೊಳ್ಳುವ ಉದ್ದೇಶವಿಟ್ಟುಕೊಂಡು ಇಂಡಿಯ ಒಕ್ಕೂಟ ಅಲ್ಲಿಗೆ ತೆರಳಿದೆ.

ಅಧೀರ್ ರಂಜನ್ ಚೌಧರಿ, ಕೆ, ಸುರೇಶ್ ಕಾಂಗ್ರೆಸ್‍ನಿಂದ ಲಾಲನ್ ಸಿಂಗ್ ಜನತಾದಳ ಯು, ಸುಸ್ಮಿತ ದೇವ್ ತೃಣಮೂಲ ಕಾಂಗ್ರೆಸ್, ಕನಿಮೊಳಿ ಡಿಎಂಕೆ, ಎಐ ರಹೀಂ ಸಿಪಿಎಂ, ಇಟಿ ಮುಹಮ್ಮದ್ ಬಶೀರ್ ಮುಸ್ಲಿಂ ಲೀಗ್, ಮನೋಜ್ ಝಾ ಆರ್‍ಜೆಡಿ, ಜಾವೇದ್ ಅಲಿಖಾನ್ ಸಮಾಜವಾದಿ ಪಾರ್ಟಿ. ಪಿ ಸಂತೋಷ್ ಕುಮಾರ್ ಸಿಪಿಐ, ಮಹುವ ಮಾಜಿ ಜೆಎಂಎಂ, ಮುಹಮ್ಮದ್ ಫೈಸಲ್ ಎನ್‍ಸಿಪಿ, ಎನ್‍ಕೆ ಪ್ರೇಮಚಂದ್ರನ್ ಆರ್‍ಎಸ್‍ಪಿ, ಸುಶೀಲ್ ಗುಪ್ತ ಆಮ್ ಆದ್ಮಿ ಪಾರ್ಟಿ, ಅರವಿಂದ್ ಸಾವಂತ್ ಶಿವಸೇನೆ, ತಿರುಮಾವಲನ್ ವಿಸಿಕೆ. ಜಯಂತ್ ಚೌಧರಿ ಆರ್‍ಜೆಡಿ ಪ್ರತಿಪಕ್ಷಗಳ ಇಂಡಿಯ ತಂಡದಲ್ಲಿದ್ದಾರೆ.

ಗೌರವ್‍ ಗೊಗೊಯಿ, ಫುಲೊದೇವಿ ನೆತಂ ಕಾಂಗ್ರೆಸ್, ಡಿ. ರವಿಕುಮಾರ್ ಡಿಎಂಕೆ, ಅನಿಲ್ ಹೆಗ್ಡೆ ಜೆಡಿಯು ಇವರ ಜೊತೆ ಇದ್ದರು.  ಶನಿವಾರ ಬೆಳಗ್ಗೆ ದಿಲ್ಲಿಯಿಂದ ಹೊರಟು ಗಲಭೆ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ, ರವಿವಾರ ಮರಳಲಿದ್ದಾರೆ. ಮಣಿಪುರ ಗಲಭೆಯ ಕುರಿತು ಸುಪ್ರೀಂ ಕೋರ್ಟ್ ನಿವೃತ್ತ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ಸಿನ  ಗೌರವ್ ಗೊಗೊಯಿ ಆಗ್ರಹಿಸಿದರು.