ಜಲಿಯನ್‌ವಾಲಾ ಬಾಗ್ ಹುತಾತ್ಮರಿಗೆ ಅವಮಾನ: ನವೀಕರಣದ ಹೆಸರಿನಲ್ಲಿ ಇತಿಹಾಸ ಅಳಿಸುತ್ತಿರುವ ಸರಕಾರ- ಜನಾಕ್ರೋಶ

0
609

ಸನ್ಮಾರ್ಗ ವಾರ್ತೆ

ಅಮೃತಸರ: ನವೀಕರಣದ ಹೆಸರಿನಲ್ಲಿ ಜಲಿಯನ್‍ವಾಲಾ ಬಾಗ್  ಸ್ಮಾರಕದ ಪರಂಪರೆಯನ್ನು ನಷ್ಟಪಡಿಸಲಾಗುತ್ತಿದೆಯೆಂದು ಆರೋಪಿಸಿ ಮೋದಿ ಸರಕಾರದ ವಿರುದ್ಧ ಜನರು ಆಕ್ರೋಶಿತರಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಕರಾಳ ಘಟನೆ ಜಲಿಯನ್‌ವಾಲಾ ಬಾಗ್ ಸಮೂಹಿಕ ಹತ್ಯೆಯ ಹುತಾತ್ಮರನ್ನು ಮೋದಿ ಸರಕಾರ ಅಮಾನಿಸುತ್ತಿದೆ ಎಂದು ಇವರು ಹೇಳುತ್ತಿದ್ದಾರೆ. ಇತ್ತೀಚೆಗೆ ಈ ಸ್ಮಾರಕ‌ವನ್ನಯ ನವೀಕರಿಸಲಾಗಿದ್ದು, ಅದನ್ನು ಪ್ರದಾನಿ ಉದ್ಘಾಟಿಸಿದ್ದರು. ಸಮುಚ್ಚಯದಲ್ಲಿ ಸ್ಥಾಪಿಸಿದ ಲೈಟ್‍ ಶೋ ಚಿತ್ರಗಳನ್ನು ಅವರು ಟ್ವೀಟ್ ಮಾಡಿದ್ದರು.

ಗುಂಡೇಟಿನಿಂದ ತಪ್ಪಿಸಿಕೊಳ್ಳಲು ಹಲವು ಮಂದಿ ಬಾವಿಗೆ ಹಾರಿದ್ದರು. ಈ ಬಾವಿಯನ್ನು ಈಗ ಗ್ಲಾಸ್ ಶೀಲ್ಡ್‌ನಿಂದ ಮುಚ್ಚಲಾಗಿದೆ. ಪ್ರವೇಶ ದ್ವಾರದ ಸಮೀಪದಲ್ಲಿ ಹೊಸ ಹೈಟೆಕ್ ಗ್ಯಾಲರಿ ತರಲಾಗಿದೆ. ಪಂಜಾಬ್‍ನಲ್ಲಿ ನಡೆದ ಘಟನೆಯನ್ನು ಚಿತ್ರದಲ್ಲಿ ವಿವರಿಸಲಾಗುತ್ತಿದೆ. 1919 ಎಪ್ರಿಲ್ 13ಕ್ಕೆ ನಡೆದ ಘಟನೆಯ ಮರುಸೃಷ್ಟಿಗಾಗಿ ಸೌಂಡ್ ಆಂಡ್ ಲೈಟ್ ಶೋ ಮಾಡಲಾಗಿದೆ. ಜನರು ಬಿದ್ದು ಸಾಯುವ ಶಹೀದಿ ಬಾವಿಯ ಹೊರತು ಜ್ವಾಲ ಸ್ಮಾರಕವನ್ನು ಮೋಡಿಫೈ ಮಾಡಲಾಗಿದ್ದು ಸ್ಮಾರಕದೊಳಗಿನ ಜಲಾಶಯ ತಾವರೆಯಾಗಿ ಬದಲಾಯಿಸಲಾಗಿದೆ. ದಾರಿಗಳನ್ನು ನವೀಕರಿಸಲಾಗಿದೆ.

ಸ್ವಂತಿಕೆ ಕಳೆದುಕೊಳ್ಳುವ ರೀತಿಯಲ್ಲಿ ನವೀಕರಣ ನಡೆದಿದೆ ಎಂದು ಜನರು ಹೇಳುತ್ತಿದ್ದಾರೆ. ಜಲಿಯನ್‌ವಾಲಾ ಬಾಗ್‍ಗೆ ಇಕ್ಕಟ್ಟಾಗಿದ್ದ ಒಂದು ದಾರಿಯಿತ್ತು. ಇದರಲ್ಲಿ ಜನರಲ್ ಡಯರ್ ಸೇನೆ ನುಗ್ಗಿ ಜನರಿಗೆ ಗುಂಡು ಹಾರಿಸಿ ಕೊಂದಿತ್ತು. ಈ ದಾರಿಯಿಂದಲೇ ಸಂದರ್ಶಕರು ಬರುತ್ತಿದ್ದರು. ಆದರೆ ನವೀಕರಿಸುವ ಹೆಸರಿನಲ್ಲಿ ಈ ದಾರಿಯನ್ನು ಮುಚ್ಚಿಹಾಕಲಾಗಿದೆ. ಇಲ್ಲಿ ಶಿಲ್ಪಗಳನ್ನು ಇರಿಸಲಾಗಿದೆ. ಸ್ಮಾರಕಕ್ಕೆ ಬರುವುದಕ್ಕೆ ಮತ್ತು ಹೋಗುವುದಕ್ಕೆ ಹೊಸದಾಗಿ ದಾರಿ ಮಾಡಿಕೊಡಲಾಗಿದೆ.