ವಿಮಾನಗಳಲ್ಲಿ ಪೇಜರ್‌, ವಾಕಿ-ಟಾಕಿಗಳನ್ನು ನಿಷೇಧಿಸಿದ ಇರಾನ್

0
57

ಸನ್ಮಾರ್ಗ ವಾರ್ತೆ

ಟೆಹ್ರಾನ್: ಇರಾನ್ ತನ್ನ ಎಲ್ಲಾ ವಿಮಾನಗಳಲ್ಲಿ ಪೇಜರ್‌, ವಾಕಿ-ಟಾಕಿಗಳನ್ನು ನಿಷೇಧಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿದೆ.

“ಮೊಬೈಲ್ ಫೋನ್‌ಗಳನ್ನು ಹೊರತುಪಡಿಸಿ, ಫ್ಲೈಟ್ ಕ್ಯಾಬಿನ್‌ಗಳಲ್ಲಿ, ಲಗೇಜುಗಳಲ್ಲಿ ಯಾವುದೇ ಎಲೆಕ್ಟ್ರಾನಿಕ್ ಸಂವಹನ ಸಾಧನಗಳನ್ನು ನಿಷೇಧಿಸಲಾಗಿದೆ” ಎಂದು ಇರಾನ್‌ನ ನಾಗರಿಕ ವಿಮಾನಯಾನ ಸಂಸ್ಥೆಯ ವಕ್ತಾರ ಜಾಫರ್ ಯಾಜೆರ್ಲೋ ಅವರನ್ನು ಉಲ್ಲೇಖಿಸಿ ISNA ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲೆಬನಾನ್‌ನಲ್ಲಿ ಇರಾನ್ ಮಿತ್ರ ಹಿಜ್ಬುಲ್ಲಾ ಗುಂಪಿನ ಸದಸ್ಯರನ್ನು ಗುರಿಯಾಗಿಸಿಕೊಂಡು ಪೇಜರ್‌ಗಳು ಮತ್ತು ವಾಕಿ-ಟಾಕಿಗಳು ಸ್ಫೋಟಗೊಂಡು ಕನಿಷ್ಠ 39 ಜನರನ್ನು ಕೊಂದ ಮೂರು ವಾರಗಳ ನಂತರ ಈ ನಿರ್ಧಾರವು ಬಂದಿದೆ.

ಈ ತಿಂಗಳ ಆರಂಭದಲ್ಲಿ ದುಬೈ ಮೂಲದ ಏರ್‌ಲೈನ್ಸ್ ಎಮಿರೇಟ್ಸ್ ತನ್ನ ವಿಮಾನಗಳಲ್ಲಿ ಪೇಜರ್‌ಗಳು ಮತ್ತು ವಾಕಿ-ಟಾಕಿಗಳನ್ನು ನಿಷೇಧಿಸಿತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗಾಜಾ ಯುದ್ಧ ಪ್ರಾರಂಭವಾದಾಗಿನಿಂದ ಪ್ರಾದೇಶಿಕ ಉದ್ವಿಗ್ನತೆಗಳು ಗಗನಕ್ಕೇರಿವೆ.