ಇರಾನ್ ಕ್ಷಿಪಣಿ ದಾಳಿ ವಿಫಲ: ಇಸ್ರೇಲ್ ಹೇಳಿಕೆಯ ಸುಳ್ಳನ್ನು ಬಹಿರಂಗಕ್ಕೆ ತಂದ ಸ್ಯಾಟಲೈಟ್ ಚಿತ್ರಗಳು

0
249

ಸನ್ಮಾರ್ಗ ವಾರ್ತೆ

ಇಸ್ರೇಲ್ ನಗರಗಳನ್ನು ಗುರಿಯಾಗಿಸಿ ಇರಾನ್ ಹಾರಿಸಿದ ಕ್ಷಿಪಣಿ ಆಕ್ರಮಣದ ಇನ್ನಷ್ಟು ಮಾಹಿತಿಗಳು ಹೊರ ಬಿದ್ದಿವೆ. ಇಸ್ರೇಲಿನ ಅತಿ ಪ್ರಮುಖ ಸೈನಿಕ ಸ್ಥಾವರಗಳಲ್ಲಿ ಒಂದಾಗಿರುವ ನೆವಾಟಿನ್ ಏರ್ ಬೇಸ್ ನಲ್ಲಿ ಇರಾನಿನ ಕ್ಷಿಪಣಿಗಳು ಮಾಡಿರುವ ಬಾರಿ ಅನಾಹುತದ ದೃಶ್ಯಗಳು ಇದೀಗ ಹೊರಬಿದ್ದಿವೆ.

ಅಂತಾರಾಷ್ಟ್ರೀಯ ಏಜೆನ್ಸಿಯಾದ ಅಸೋಸಿಯೇಟೆಡ್ ಪ್ರೇಸ್ಸಂಸ್ಥೆಯು ಸ್ಯಾಟಲೈಟ್ ದೃಶ್ಯಗಳನ್ನು ಬಿಡುಗಡೆಗೊಳಿಸಿದ್ದು ಇಸ್ರೇಲಿ ಮಾಧ್ಯಮಗಳು ಇದನ್ನು ಪ್ರಕಟಿಸಿವೆ

ನೆವಾಟಿ ಎಂಬುದು ಇಸ್ರೇಲ್ ನ ಅತ್ಯಧಿಕ ಸುರಕ್ಷತೆಯ ಮತ್ತು ತಾಂತ್ರಿಕವಾಗಿ ಅತಿ ಉನ್ನತವಾದ ವಿಮಾನ ನಿಲ್ದಾಣವಾಗಿದೆ. ಇಸ್ರೇಲಿನ ಅತಿ ಉನ್ನತ ಸೇನಾ ವಿಮಾನ ನಿಲ್ದಾಣವಾಗಿ ಇದು ಗುರುತಿಸಿಕೊಂಡಿದೆ. ದಕ್ಷಿಣ ಇಸ್ರೇಲಿನಲ್ಲಿ ಇದನ್ನು ಸ್ಥಾಪಿಸಲಾಗಿದೆ. ಇದರ ಮೇಲೆ ಇರಾನ್ ದಾಳಿ ನಡೆಸಿರುವುದು ಇರಾನ್ ನ ಸೈನಿಕ ಸಾಮರ್ಥ್ಯವನ್ನು ಬಿಂಬಿಸಿದೆ. ಇಸ್ರೇಲ್ ಈ ದೃಶ್ಯಗಳು ಬಹಿರಂಗಕ್ಕೆ ಬಾರದಂತೆ ತಡೆದಿರುವುದರ ನಡುವೆಯೂ ಅವುಗಳ ದೃಶ್ಯಗಳು ಇದೀಗ ಹೊರ ಬಿದ್ದಿವೆ.

ಇರಾನ್ ನ ಮಿಸೈಲ್ ಆಕ್ರಮಣದಿಂದಾಗಿ ವಿಮಾನ ನಿಲ್ದಾಣದ ಮೇಲ್ಭಾಗದಲ್ಲಿ ಭಾರಿ ದೊಡ್ಡ ತೂತು ಉಂಟಾಗಿದೆ ಎಂದು ಟೈಮ್ಸ್ ಆಫ್ ಇಸ್ರಾಯಿಲ್ ವರದಿ ಮಾಡಿದೆ. ಇಸ್ರೇಲಿನ ಅತ್ಯಾಧುನಿಕ ಯುದ್ಧ ವಿಮಾನಗಳು ಈ ವಿಮಾನ ನಿಲ್ದಾಣದಲ್ಲಿ ಇದ್ದವು ಎಂದು ಪತ್ರಿಕೆ ವರದಿಗಳು ತಿಳಿಸಿವೆ.

ತಮ್ಮ ಸೇನಾ ನೆಲೆಗಳ ಮೇಲೆ ಇಸ್ರೇಲ್ ಕ್ಷಿಪಣಿ ಹಾರಿಸಿದೆ ಎಂದು ಇಸ್ರೇಲ್ ಈ ಮೊದಲೇ ಒಪ್ಪಿಕೊಂಡಿತ್ತು. ಆದರೆ ನಾಶನಷ್ಟಗಳೇನೂ ಆಗಿಲ್ಲ ಎಂದು ಅದು ಹೇಳಿಕೊಂಡಿತ್ತು. ಇದೀಗ ಸ್ಯಾಟಲೈಟ್ ದೃಶ್ಯಗಳು ಇಸ್ರೇಲ್ ಹೇಳಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸಿದೆ. ಮಾತ್ರ ಅಲ್ಲ ಇಸ್ರೇಲ್ ಸೇನೆ ಈ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ನಿರಾಕರಿಸಿದೆ.