ಸನ್ಮಾರ್ಗ ವಾರ್ತೆ
ಓಸ್ಲೋ; ಮಹಿಳಾ ಹಕ್ಕುಗಳು ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ಇರಾನ್ ಮಾನವ ಹಕ್ಕುಗಳ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಲಭಿಸಿದೆ. ನರ್ಗಿಸ್ ಸಫಿಯ ಮುಹಮ್ಮದ್ ಈಗ ಜೈಲಿನಲ್ಲಿದ್ದು 2016ರಲ್ಲಿ ಮರಣದಂಡನೆ ನಿಲ್ಲಿಸುವ ಪ್ರಚಾರಕ್ಕೆ ಮಾನವ ಹಕ್ಕು ಆಂದೋಲನ ಸ್ಥಾಪಿಸಿದ್ದಕ್ಕಾಗಿ ಇರಾನ್ ಹದಿನಾರು ವರ್ಷ ಸಫಿಯಾರನ್ನು ಜೈಲು ಶಿಕ್ಷೆ ನೀಡಿದೆ. 2022ರಲ್ಲಿ ಜಗತ್ತಿನ ಮೇಲೆ ಪ್ರಭಾವ ಬೀರಿದ 100 ಮಹಿಳೆಯರ ಪಟ್ಟಿಯಲ್ಲಿ ಇವರು ಸ್ಥಾನ ಪಡೆದುಕೊಂಡಿದ್ದರು. ಇರಾನ್ ಸರಕಾರದ ವಿರುದ್ಧ ಹೋರಾಟದಲ್ಲಿ ಹದಿಮೂರು ಬಾರಿ ಬಂಧನಕ್ಕೊಳಗಾಗಿದ್ದರು.
ಇರಾನಿನ ಸಂಜನದಲ್ಲಿ ಸಫಿಯಾ ಹುಟ್ಟಿದರು. ಇಮಾಮ್ ಖಾಮ್ನೈ ಇಂಟರ್ನ್ಯಾಶನಲ್ ಯುನಿವರ್ಸಿಟಿಯಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಲವು ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ. 2003ರಲ್ಲಿ ಶಿರಿನ್ ಇಬಾದಿಯ ನೇತೃತ್ವದಲ್ಲಿ ಡಿಫೆಂಡರ್ಸ್ ಆಫ್ ಹ್ಯೂಮನ್ ರೈಟ್ಸ್ ಸೆಂಟರಿಗೆ ಸೇರಿ ಸಂಘಟನೆಯ ಉಪಾಧ್ಯಕ್ಷೆಯಾದರು.1999ರಲ್ಲಿ ಸುಧಾರಣೆ ಪರ ಪತ್ರಕರ್ತ ತಾಗಿ ರಹ್ಮಾನಿಯವರನ್ನು ಮದುವೆಯಾದರು. ಅಲಿ, ಕಿಯಾನ ಎಂಬ ಎರಡು ಮಕ್ಕಳಿದ್ದಾರೆ. 2012ರಲ್ಲಿ ನರ್ಗಿಸ್ ಸಫಿಯಾ ಫ್ರಾನ್ಸ್ ಗೆ ವಾಸ್ತವ್ಯ ಬದಲಿಸಿದರು. ಅಲ್ಲಿಂದ ಇರಾನಿನ ಮಹಿಳೆಯರಿಗಾಗಿ ಕೆಲಸ ಮುಂದುವರಿಸಿದರು. ಇರಾನ್ ಸರಕಾರವನ್ನು ಟೀಕಿಸಿದ್ದಕ್ಕೆ ಮೊದಲ ಬಾರಿ 1998ರಲ್ಲಿ ಬಂಧಿಸಲ್ಪಟ್ಟಿದ್ದರು.












