ಬಿಸ್ಕೆಟ್ ನಲ್ಲಿ ಕಬ್ಬಿಣದ ಚೂರು: ವಿಡಿಯೋ ಹಂಚಿಕೊಂಡ ಹೆತ್ತವರು, ಆಕ್ರೋಶ ವ್ಯಕ್ತಪಡಿಸಿದ ಸೋಶಿಯಲ್ ಮೀಡಿಯಾ

0
85

ಸನ್ಮಾರ್ಗ ವಾರ್ತೆ

ಮಕ್ಕಳಿಗೆಂದು ಖರೀದಿಸಿದ ಬರ್ಬನ್ ಬಿಸ್ ಕ್ಯೂಟ್ ನಲ್ಲಿ ಕಬ್ಬಿಣದ ಚೂರು ಪತ್ತೆಯಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೈದರಾಬಾದ್ ನ ಕಾಮರೆಡ್ಡಿ ಜಿಲ್ಲೆಯ ಹನುಮಾನ್ ರೆಡ್ಡಿ ಈ ಮಾಹಿತಿಯನ್ನು ವಿಡಿಯೋ ಸಹಿತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತನ್ನ ಮಕ್ಕಳು ಈ ಬಿಸ್ಕೆಟ್ ಅನ್ನು ತಿನ್ನುವ ವೇಳೆ ತಾನು ಇದನ್ನು ಪತ್ತೆ ಹಚ್ಚಿರುವುದಾಗಿ ಅವರು ಹೇಳಿಕೊಂಡಿದ್ದು ಇಂತಹ ಉತ್ಪನ್ನಗಳನ್ನು ಉಪಯೋಗಿಸುವ ಮೊದಲು ಹೆತ್ತವರು ಜಾಗರೂಕತೆ ಪಾಲಿಸಬೇಕು ಎಂದು ಹೇಳಿದ್ದಾರೆ. ಹತ್ತಿರದ ಅಂಗಡಿಯಿಂದ ತಾನು ಈ ಬಿಸ್ಕೆಟನ್ನು ಖರೀದಿಸಿ ರುವುದಾಗಿ ಅವರು ಹೇಳಿದ್ದಾರೆ.

ಮಕ್ಕಳು ಪಾಕೆಟ್ ಉತ್ಪನ್ನಗಳನ್ನು ಖರೀದಿಸುತ್ತಾರೆ ಮತ್ತು ಅಲ್ಲಿಯೇ ಸೇವಿಸುತ್ತಾರೆ. ಕೆಲವೊಮ್ಮೆ ಮನೆಗೆ ತಂದು ಸೇವಿಸುತ್ತಾರೆ. ಈ ಸಂದರ್ಭಗಳಲ್ಲಿ ಹೆತ್ತವರು ಹೆಚ್ಚು ಜಾಗೃತೆಯನ್ನು ಪಾಲಿಸಬೇಕು. ಮಕ್ಕಳಿಗೆ ಗೊತ್ತಿಲ್ಲದೆಯೇ ಕೆಲವೊಮ್ಮೆ ಇಂತಹ ತುಣುಕುಗಳು ಹೊಟ್ಟೆ ಸೇರಿ ಅಪಾಯವನ್ನು ತಂದೊಡ್ಡಬಹುದು ಎಂದವರು ಹೇಳಿದ್ದಾರೆ.

ರೆಡ್ಡಿಯವರು ಹಂಚಿಕೊಂಡ ಈ ವಿಡಿಯೋಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಸ್ಕ್ಯೂಟ್ ಕಂಪನಿಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.