ಇಸ್ರೇಲಿನಿಂದ ಗಾಝದ ಮೇಲಿನ ನಿರ್ಬಂಧ ಸಡಿಲಿಕೆ

0
418

ಸನ್ಮಾರ್ಗ ವಾರ್ತೆ

ಜೆರುಸಲೇಮ್: ಗಾಝ ಪಟ್ಟಿಯ ಮೇಲೆ ಇಸ್ರೇಲ್ ಹೇರಿದ್ದ ನಿರ್ಬಂಧ ಸಡಿಲಿಕೆ ಮಾಡಿದ್ದು ಪುನರ್ ನಿರ್ಮಾಣಕ್ಕೆ ಅಗತ್ಯವಾದ ವಸ್ತು, ಇತ್ಯಾದಿಗಳನ್ನು ತರಲು ಅನುಮತಿ ನೀಡಿದೆ. ಕಳೆದ ಮೇಯಲ್ಲಿ ಇಸ್ರೆಲಿನ ದಾಳಿಯಿಂದಾಗಿ ಗಾಝದಲ್ಲಿ ನಾಶನಷ್ಟ ಸಂಭವಿಸಿತ್ತು. ಇದರ ಪುನರ್ ನಿರ್ಮಾಣಕ್ಕೆ ಅಗತ್ಯ ವಸ್ತುಗಳನ್ನು ತರಲಾಗುತ್ತಿದೆ.

ಮೀನುಗಾರಿಕೆ ವಿಸ್ತರಿಸಲು ಅನುಮತಿ, ಕೆರಂಶಾಲೊಂ ರಸ್ತೆ ತೆರೆಯುವ ತೀರ್ಮಾನ ಸರಕಾರ ಅಂಗೀಕರಿಸಿದೆ. ಇಲ್ಲಿ ನೀರು ಸರಬರಾಜು ಹೆಚ್ಚಿಸಲು, ಗಾಝದಿಂದ ವ್ಯಾಪಾರಿಗಳಿಗೆ ಇಸ್ರೇಲಿಗೆ ಬರಲು ಬಿಡುವುದು ಇತ್ಯಾದಿ ಬೆನೆಟ್ ಸರಕಾರ ಅನುಮತಿ ನೀಡಿದೆ.

2007ರ ಫೆಲಸ್ತೀನಿ ಚುನಾವಣೆಯಲ್ಲಿ ಹಮಾಸ್ ಗೆದ್ದ ಬಳಿಕ ಗಾಝಪಟ್ಟಿಗೆ ಇಸ್ರೇಲ್ ಮತ್ತು ಈಜಿಪ್ಟ್ ನಿಷೇಧ ಹೇರಿತ್ತು. ಪಟ್ಟಿಯಿಂದ ಹೊರಗೆ ಜನರು ಮತ್ತು ವಸ್ತುಗಳ ಸಾಗಾಟಕ್ಕೆ ನಿಷೇಧ ಹೇರಲಾಗಿತ್ತು. ಇದು ಅರ್ಥವ್ಯವಸ್ಥೆಯನ್ನು ಬುಡಮೇಲು ಗೊಳಿಸಿತ್ತು. ಕಳೆದ ಮೇಯಲ್ಲಿ ನಡೆದ ದಾಳಿಯ ನಂತರ ಇಸ್ರೇಲ್ ಗಾಝದ ಮೇಲೆ ದಿಗ್ಬಂಧನವನ್ನು ಇನ್ನಷ್ಟು ತೀವ್ರಗೊಳಿಸಿತ್ತು.