ಜಗತ್ತನ್ನೇ ಬಂಧಿಯಾಗಿಸಿರುವ ಇಸ್ರೇಲ್

0
69

ಸನ್ಮಾರ್ಗ ವಾರ್ತೆ

✍️ ಶಾಝಿಲ್ ಉಸ್ಮಾನ್

ಫಾತಿಮಾ ಜಅಫರ್ ಅಬ್ದುಲ್ಲ ಎಂಬ ಒಂಬತ್ತು ವರ್ಷದ ಬಾಲಕಿ ಲೆಬನಾನಿನ ತನ್ನ ಮನೆಯಲ್ಲಿ ಶಾಲೆಯ ಮನೆಪಾಠ ಮಾಡುವುದರ ನಡುವೆ ಅಡುಗೆ ಕೋಣೆಗೆ ಹೋಗಿದ್ದಳು. ಮೇಜಿನ ಮೇಲಿದ್ದ ಪೇಜರ್ ಬೀಫ್ ಎನ್ನುತ್ತಿತ್ತು. ಅದನ್ನು ತಂದೆಗೆ ಕೊಡಲು ಕೈಗೆತ್ತಿಕೊಂಡಳು. ತಕ್ಷಣ ಪೇಜರ್ ಸ್ಫೋಟವಾಯಿತು. ಮುಖ ಚಿಂದಿಯಾಯಿತು. ಅವಳು ಮೃತಪಟ್ಟಳು. ಅವಳ ಮೃತದೇಹ ಸಂಸ್ಕಾರ ಕಾರ್ಯದ ನಡುವೆ ಆ ಮೇಲೆಯೂ ಸ್ಫೋಟ ನಡೆಯಿತು. ಹನ್ನೊಂದು ವರ್ಷದ ಬಾಲಕನ ಸಹಿತ ಅನೇಕ ನಾಗರಿಕರು ಪೇಜರ್ ಸ್ಫೋಟದಲ್ಲಿ ಕೊಲ್ಲಲ್ಪಟ್ಟರು. ಅಸಂಖ್ಯ ಮಂದಿ ಗಾಯಗೊಂಡರು.

ಬೀದಿಯಲ್ಲಿ ಆಡುತ್ತಿದ್ದ ಮಕ್ಕಳ ಕಣ್ಣು ಹೋಯಿತು. ಸೂಪರ್ ಮಾರ್ಕೆಟ್‌ನಲ್ಲಿ ಸಾಮಾನು ಖರೀದಿಸುತ್ತಿದ್ದ ತಾಯಂದಿರು ಕೈಗಳನ್ನು ಕಳಕೊಂಡರು. ತರಕಾರಿ ವ್ಯಾಪಾರಿಯ ತಲೆ ಸಿಡಿಯಲ್ಪಟ್ಟು ಮೃತಪಟ್ಟ. ಮನೆಗಳಿಗೆ, ವಾಹನಗಳಿಗೆ ಬೆಂಕಿ ಹಿಡಿಯಿತು. ಆಸ್ಪತ್ರೆಯ ವೈದ್ಯರು ಗಂಭೀರವಾಗಿ ಗಾಯಗೊಂಡರು. ಇದು ಅಚಾತುರ್ಯದಿಂದ ನಡೆದ ಸ್ಫೋಟವಲ್ಲ. ಯೋಜಿತವಾಗಿತ್ತು. ಅದರ ಪರಿಣಾಮದ ಕುರಿತು ಸರಿಯಾಗಿ ಗೊತ್ತಿದ್ದವರೇ ನಡೆಸಿದ ಸ್ಫೋಟವಾಗಿತ್ತು.

ಲೆಬನಾನ್, ಸಿರಿಯಗಳಲ್ಲಿ ನಡೆದ ಈ ಇಲೆಕ್ಟ್ರಾನಿಕ್ ಭಯೋತ್ಪಾದನೆಯು ಆ ದೇಶಗಳಿಗೆ ಮಾತ್ರ ಸೀಮಿತವಾದ ವಿಷಯವಾಗಿದೆ ಎಂದು ತಿಳಿಯುವವರು ಮೂರ್ಖರ ಸ್ವರ್ಗದಲ್ಲಿದ್ದಾರೆ ಎನ್ನಬೇಕು. ಪೇಜರ್ ಹಲವು ದೇಶಗಳಲ್ಲಿ ಬಳಕೆಯಲ್ಲಿಲ್ಲ. ಆದರೆ ವಾಕಿ ಟಾಕಿ ಈಗಲೂ ಬಳಕೆಯಾಗುತ್ತಿದೆ. ಸಂಚಾರ ಸುರಕ್ಷೆ ಇತ್ಯಾದಿಗೆ ವ್ಯಾಪಕವಾಗಿ ಉಪಯೋಗಿಸುವ ರೇಡಿಯೊ ಉಪಕರಣಗಳು ಲೆಬನಾನಿನಲ್ಲಿ ಸ್ಫೋಟಗೊಂಡಿವೆ ಎಂಬುದನ್ನು ತಿಳಿಯಬೇಕು.

ಈ ವಾಕಿಟಾಕಿ ಸ್ಫೋಟದಿಂದಾಗಿ ಕೆಲವು ಜನ ಸತ್ತರು. ಮೊಬೈಲ್ ಫೋನ್, ಲ್ಯಾಪ್‌ಟಾಪ್, ಸೌರ ಇಂಧನ ಸೆಲ್‌ಗಳು ಇತ್ಯಾದಿ ಸಾಮಾನ್ಯರು ನಿತ್ಯ ಜೀವನದಲ್ಲಿ ಬಳಕೆ ಮಾಡುತ್ತಾರೆ. ಸುದ್ದಿ ವಿನಿಮಯಿಸುವ ಇಲೆಕ್ಟ್ರಾನಿಕ್ ಉಪಕರಣಗಳು ಭಯೋತ್ಪಾದಕ ಆಯುಧವಾಗಿ ಬಳಸಲ್ಪಟ್ಟದ್ದು ಗಂಭೀರವಾಗಿದೆ. ಪಿಶಾಚಿಯ ಹಿಂಸೆಯ ಹುಚ್ಚು ತಲೆಗೆ ಅಡರಿರುವ ಒಂದು ಅಕ್ರಮಿಗಳ ತಂಡಕ್ಕೆ ಮಾತ್ರ ಹೀಗೆ ಮಾಡಲು ಸಾಧ್ಯವಾಗುವುದು. ಮನುಷ್ಯ ಉಪಕಾರಕ್ಕಿರುವ ಉಪಕರಣಗಳು, ತಂತ್ರಜ್ಞಾನವನ್ನು ಕೊಲೆ ಮಾಡುವ ಆಯುಧಗಳನ್ನಾಗಿ ವಶ ಪಡಿಸಿಕೊಂಡಿದ್ದಾರೆ. ಅವರೇ ಒಂದು ಕ್ಷೇತ್ರವನ್ನು ಮಾತ್ರವಲ್ಲ ಜಗತ್ತಿನುದ್ದಕ್ಕೂ ಹಿಂಸೆಯ ಹೊಸ ಬಾಗಿಲು ತೆರೆದಿದ್ದಾರೆ.

ತಂಟೆಕೋರರ ಕೈಯಲ್ಲಿ ಹೊಸ ಆಯುಧಗಳನ್ನು ಕೊಟ್ಟು ಬಿಡಲಾಗಿದೆ. ಮಾನವ ಹಕ್ಕು ಉಲ್ಲಂಘನೆ ಮತ್ತು ಯುದ್ಧಾಪರಾಧಗಳಿಗೆ, ವಂಶ ಹತ್ಯೆಗೆ ಸೈಬರ್ ವಿದ್ಯೆಯನ್ನು ಉಪಯೋಗಿಸುವಂತೆ ಮಾಡಿದ್ದು ಜಗತ್ತಿನಲ್ಲಿ ಅಶಾಂತಿಯ ಭೀತಿ ಹರಡಿದೆ. ಎಲ್ಲರಿಗೂ ಗೊತ್ತು ಯಾರು ಈ ಅಕ್ರಮಿಗಳ ತಂಡ ಎಂಬುದು ರಾಜಕೀಯ ನಾಯಕರು ಮಾಧ್ಯಮಗಳು ಮತ್ತು ತಜ್ಞರು ಒಂದೇ ಸವನೆ ಅದು ಇಸ್ರೇಲೆ ಎಂದು ಹೇಳುತ್ತಿದ್ದಾರೆ. ಆ ದೇಶ ಅದನ್ನು ನಿರಾಕರಿಸುವುದು ಇಲ್ಲ.

ಗಾಝಾದ ಸ್ವಾತಂತ್ರ್ಯ ಹೋರಾಟಗಾರರನ್ನು ಬೆಂಬಲಿಸುವ ಹಿಝ್ಬುಲ್ಲದ ದಾಳಿಯ ಮುಖ್ಯ ಗುರಿ ಸ್ಪಷ್ಟವಾಗಿದೆ. ಇಸ್ರೇಲ್ ರಕ್ಷಣಾ ಸಚಿವ ಯೇವ್ ಗೆಲೆಂಟ್, ಯುದ್ಧದ ಗುರುತ್ವ ಕೇಂದ್ರ ಉತ್ತರಕ್ಕೆ ಲೆಬನಾನಿನೆಡಗೆ ತಿರುಗಿದೆ ಎಂದಿದ್ದಾರೆ. ಯುದ್ಧದಲ್ಲಿ ಹೊಸ ಹಂತ ಇದು. 1996ರಲ್ಲಿ ಹಮಾಸ್ ಆಯುಧ ತಜ್ಞ ಯಹ್ಯ ಅಯ್ಯಾಶ್‌ರನ್ನು ಮೊಬೈಲ್ ಫೋನ್ ಸ್ಫೋಟದಲ್ಲಿ ಕೊಲೆ ಮಾಡಿದ್ದು ಇಸ್ರೇಲ್ ಕೃತಕ ಬುದ್ಧಿಮತ್ತೆ ಡ್ರೋನ್ ಅಲ್‌ಗೊರಿದಂ ಸಹಿತ ವಿವಿಧ ತಂತ್ರಜ್ಞಾನ ಸಾಧ್ಯತೆಗಳನ್ನು ಕೊಲ್ಲಲು ಅಭಿವೃದ್ಧಿ ಪಡಿಸಿದ ದೇಶ ಅದು. ಸ್ಫೋಟಕ್ಕೆ ಬಳಸಿದ ಉಪಕರಣ ಮೊಟೊರೊಳ 2024 ಪೇಜರ್‌ಗಳು, ಮೊಬೈಲ್ ಫೋನ್‌ಗಳು ಎಲ್ಲರೂ ಉಪಯೋಗಿಸುವ ವಸ್ತುಗಳಾಗಿವೆ. ಅದನ್ನು ಉಪಯೋಗಿಸದ ಒಂದೇ ಒಂದು ಸಂಸ್ಥೆ ಇಲ್ಲ.

ಅಮೆರಿಕದ ಯುನಿವರ್ಸಿಟಿ ಆಫ್ ಬೈರೂತ್ ಆಸ್ಪತ್ರೆಯು ಅಲ್ಲಿದ್ದ ಮೊಟೊರೊಲ ಉಪಕರಣಗಳನ್ನು ಒಂದು ವಾರದ ಹಿಂದೆಯೇ ತೆರವುಗೊಳಿಸಿತ್ತೆಂದು ವರದಿಯಾಗಿತ್ತು. ದಾಳಿಗಳು ಆರಂಭಗೊಂಡ ಮುಂಚಿನ ದಿವಸ ಒಂದು ಅಮೆರಿಕನ್ ವಿಮಾನ ಲೆಬನಾನಿನ ಮೂಲಕ ಹಾದು ಹೋಗಿತ್ತು. ಈ ಸುದ್ದಿ ನಿಜವಾದರೆ ಅಮೆರಿಕ ಕೂಡ ಶಂಕೆಯ ಮೊನೆಯಲ್ಲಿ ನಿಲ್ಲುತ್ತದೆ. ಹಂಗರಿಯ ಒಂದು ನಕಲಿ ಕಂಪೆನಿಯು ಉಪಕರಣ ನಿರ್ಮಿಸಿ ಕೊಡಲು ಲೈಸೆನ್ಸ್ ಪಡೆದ ನಂತರ ಸ್ಫೋಟಕಗಳನ್ನು ತುಂಬಿಸಿ ಲೆಬನಾನಿನ ಹಿಝ್ಬುಲ್ಲಾ ಮತ್ತು ಇತರರಿಗೆ ಮಾರಲಾಗಿತ್ತು. ಇದು ಯಾವುದೇ ಒಂದು ದೇಶ ಮತ್ತು ವಿಭಾಗದೊಂದಿಗೆ ಯುದ್ಧ ಘೋಷಣೆಯಲ್ಲ. ಜಗತ್ತಿನ ಎಲ್ಲರೊಂದಿಗೆ ಬಹಿರಂಗವಾದ ಯುದ್ಧವಾಗಿದೆ. ಬೆದರಿಕೆಯಾಗಿದೆ. ಆದುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಗ್ರ ತನಿಖೆ ಆಗಬೇಕು. ನಂತರ ಕ್ರಮ ಜರಗಿಸಬೇಕು.

ಜಗತ್ತಿನಲ್ಲಿ ಎದುರಿಸುತ್ತಿರುವ ಅಶಾಂತಿಯ ಮರ್ಮ ಫೆಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸಿದ ಅತಿಕ್ರಮಣವಾಗಿದೆ. ಅವರು ಮಾಡುತ್ತಿರುವ ವಂಶ ಹತ್ಯೆಯಾಗಿದೆ. ಈಗ ಒಂದು ವರ್ಷದಿಂದ ಆಕಾಶದಿಂದ ಅವರು ನಿರಂತರ ಮಾಡುತ್ತಿದ್ದಾರೆ. ಇಸ್ರೇಲ್‌ನ ವಿರುದ್ಧ ವಿಶ್ವಸಂಸ್ಥೆ ಅನೇಕ ಮಸೂದೆಗಳನ್ನು ಪಾಸು ಮಾಡಿತು. ಅದು ಏನೂ ಪ್ರಯೋಜವಾಗಿಲ್ಲ. ಇಸ್ರೇಲ್ ಸ್ವರಕ್ಷಣೆಯ ಹಕ್ಕಿದೆ ಎಂದು ಅಮೆರಿಕ ಬ್ರಿಟನ್ ಜರ್ಮನಿ ಮತ್ತು ಇತರರು ಹೇಳುತ್ತಿವೆ. ಅವರು ಹೇಳುತ್ತಾ ಝಿಯೊನಿಸ್ಟ್ ಇಸ್ರೇಲ್ ಕೊಬ್ಬುತ್ತಾ ಫೆಲೆಸ್ತೀನಿನಲ್ಲಿ ನರತಾಂಡವ ಆಡುತ್ತಿದೆ. ಎಳೆದ ಗೀಟು ಉಲ್ಲಂಘಿಸಿದರೆ ಎಲ್ಲ ಸಹಾಯವನ್ನು ನಿಲ್ಲಿಸುತ್ತೇವೆ ಎಂದು ಇಸ್ರೇಲಿಗೆ ಅದೆಷ್ಟೊ ಸಲ ಹೇಳಿದೆ. ಆದರೆ 1.7 ಮಿಲಿಯನ್ ಡಾಲರ್‌ನ ಸಹಾಯವನ್ನು ಇಸ್ರೇಲಿಗೆ ಅಮೆರಿಕ ಇತ್ತೀಚೆಗೆ ಕೊಟ್ಟಿತು. ಇಸ್ರೇಲಿನ ಮಾರ್ಕೆಟ್ ಸಂಪೂರ್ಣ ಡೌನ್ ಆಗಿದೆ. ಕುಸಿದ ಆರ್ಥಿಕತೆಯನ್ನು ತಾಳಿಕೊಳ್ಳಲು ಅಮೆರಿಕ ಸಾಲ ಕೊಡುತ್ತಿದೆ. ಆದರೆ ಅದನ್ನು ಫೆಲೆಸ್ತೀನಿಯರನ್ನು ಕೊಲ್ಲಲು ಲೆಬನಾನಿನಲ್ಲಿ ಬಾಂಬು ಸುರಿಸಲು ಇಸ್ರೇಲ್ ಬಳಸುತ್ತಿದೆ. ವಂಶಹತ್ಯೆಗೆ ಜಾಗತಿಕ ಕೋರ್ಟು ಆ ದೇಶದ ವಿರುದ್ಧ ಕ್ರಮಕ್ಕೆ ಶುರುಮಾಡಿ ಸಮಯ ಎಷ್ಟೋ ಆಯಿತು. ಆದರೆ ಲೆಬನಾನ್, ಫೆಲೆಸ್ತೀನಿಗೆ ಬಾಂಬು ಸುರಿಸುತ್ತಿದೆ. ಹೀಗೆ ಜಗತ್ತೇ ಇಸ್ರೇಲಿನ ಭಯೋತ್ಪಾದನೆಯಲ್ಲಿ ಬಂಧಿಯಾಗಿದೆ. ಮೊಬೈಲ್, ರೇಡಿಯೊ ಅಲೆಗಳ ಉಪಕರಣಗಳು ಲ್ಯಾಪ್‌ಟಾಪ್ ಎಲ್ಲವನ್ನೂ ಜನರ ಸುರಕ್ಷೆಗೆ ಅಪಾಯಕಾರಿಯಾಗಿ ಮಾಡಿದೆ.