ಲೆಬನಾನ್‌ನಲ್ಲಿ ಇಸ್ರೇಲಿ ಶೆಲ್ ದಾಳಿ

0
149

ಸನ್ಮಾರ್ಗ ವಾರ್ತೆ

ಟೆಲ್ ಅವೀವ್: ದಕ್ಷಿಣ ಲೆಬನಾನ್‌ನ ಬಿಂಟ್ ಜೆಬೆಲ್ ಪಟ್ಟಣದ ಹೊರವಲಯದಲ್ಲಿ ಇಸ್ರೇಲ್ ಶೆಲ್ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಲೆಬನಾನ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಕಾಫರ್ ಕಿಲಾ, ಬುರ್ಜ್ ಅಲ್-ಮುಲೂಕ್, ಟ್ಯಾಲೆಟ್ ಅಲ್-ಅಜಿಝಿಯಾ ಮತ್ತು ಮರ್ಜಯೂನ್ ಪ್ಲೇನ್‌ನ ಉಪನಗರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಶೆಲ್ ದಾಳಿ ನಡೆಸಿದೆ ಎಂದು ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆ ಹೇಳಿದೆ.

ಇಸ್ರೇಲ್‌ನ ಗಡಿಯ ಸಮೀಪ ದಕ್ಷಿಣ ಲೆಬನಾನ್‌ನ ಖಿಯಾಮ್ ಗ್ರಾಮದ ಮೇಲೆ ಇಸ್ರೇಲಿ ಬಾಂಬ್ ದಾಳಿ ನಡೆಸಿದೆ.