ಇಸ್ರೇಲ್ ದಾಳಿ ಫೆಲೆಸ್ತೀನ್‌ನ 70 ವರ್ಷಗಳ ಅಭಿವೃದ್ಧಿಯನ್ನು ನಾಶಪಡಿಸಿದೆ ; ಸಂಶೋಧನಾ ವರದಿ

0
59

ಸನ್ಮಾರ್ಗ ವಾರ್ತೆ

ಗಾಝಾ: ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ನಡೆದ ದೀರ್ಘಕಾಲದ ಯುದ್ಧದ ಪರಿಣಾಮವಾಗಿ, ಗಾಝಾದಲ್ಲಿ ಆರೋಗ್ಯ ಮತ್ತು ಶಿಕ್ಷಣದಂತಹ ಪ್ರಮುಖ ಅಭಿವೃದ್ಧಿ ಸೂಚಕಗಳು ಸುಮಾರು 70 ವರ್ಷಗಳಷ್ಟು ಹಿಮ್ಮೆಟ್ಟಿದ್ದು, ಲಕ್ಷಾಂತರ ಮಂದಿ ಇಂದು ಬಡತನ ರೇಖೆಯ ಕೆಳಗೆ ಬದುಕು ನಡೆಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಹೊಸ ವರದಿ ಬಹಿರಂಗಪಡಿಸಿದೆ.

ಯುಎನ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಯುಎನ್‌ಡಿಪಿ) ವರದಿಯಲ್ಲಿ, ಗಾಝಾದ ಮೇಲೆ ಇಸ್ರೇಲ್‌ನ ಆಕ್ರಮಣದ ಪ್ರಾರಂಭಕ್ಕೆ ಹೋಲಿಸಿದರೆ ಈಗ ಶೇಕಡಾ 35 ರಷ್ಟು ಫೆಲೆಸ್ತೀನ್ ಆರ್ಥಿಕತೆ ಕುಸಿದಿದ್ದು, ನಿರುದ್ಯೋಗದ ಪ್ರಮಾಣವು 49.9 ಶೇಕಡಾವರೆಗೆ ಏರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಗಾಝಾದ ಮಾನವ ಅಭಿವೃದ್ಧಿ ಸೂಚ್ಯಂಕವು (ಎಚ್‌ಡಿಐ), “ಮಾನವ ಅಭಿವೃದ್ಧಿಯ ಪ್ರಮುಖ ಆಯಾಮಗಳಲ್ಲಿ ಸರಾಸರಿ ಸಾಧನೆಯ ಅಳತೆ” ತೋರಿಸಿದ್ದು, ಇದು 1955ರ ಮಟ್ಟಕ್ಕೆ ಇಳಿಯುವುದಾಗಿ ಅಂದಾಜಿಸಲಾಗಿದೆ. ಇದರಿಂದಾಗಿ ಸುಮಾರು 69 ವರ್ಷಗಳ ಪ್ರಗತಿಯನ್ನು ಅಳಿಸಿ ಹಾಕಲ್ಪಟ್ಟಂತಾಗಿದೆ. ಒಂದು ವೇಳೆ ಇಸ್ರೇಲಿ ಮಿಲಿಟರಿ ದಾಳಿಗಳು ಇನ್ನೂ ಮುಂದುವರಿದರೆ ಪರಿಸ್ಥಿತಿ ಮತ್ತು ಸೂಚ್ಯಂಕವು “ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ” ಎಂದು ಎಚ್ಚರಿಸಲಾಗಿದೆ.