ಸನ್ಮಾರ್ಗ ವಾರ್ತೆ
ಹೈದರಾಬಾದ್,ಅ.2:ಇಸ್ರೊ ವಿಜ್ಞಾನಿಯೊಬ್ಬರು ಹೈದರಾಬಾದಿನ ತನ್ನ ಫ್ಲಾಟ್ನಲ್ಲಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಸ್ರೋ ರಿಮೊಟ್ ಸೆನ್ಸಿಂಗ್ ಸೆಂಟರ್ನ ವಿಜ್ಞಾನಿ ಎಸ್.ಸುರೇಶ್(56)ಮೃತರಾದ ವ್ಯಕ್ತಿ. ಮೂಲತಃ ಕೇರಳದವರಾಗಿದ್ದು ಹೈದರಾಬಾದಿನ ಅಮೀರಪೇಟ್ದ ಅನ್ನಪೂರ್ಣ ಅಪಾರ್ಟ್ಮೆಂಟಿನ ಫ್ಲಾಟಿನಲ್ಲಿ ತಲೆಗೆ ಪೆಟ್ಟು ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಅವರ ಮೃತದೇಹ ಕಂಡು ಬಂದಿತ್ತು.
ಗುರುವಾರ ಅವರು ಕಚೇರಿಗೆ ಬಂದಿರಲಿಲ್ಲ. ನಂತರ ಸಿಬ್ಬಂದಿಗಳು ಚೆನ್ನೈಯಲ್ಲಿರುವ ಅವರ ಪತ್ನಿಗೆ ವಿಷಯ ತಿಳಿಸಿದ್ದರು. ನಂತರ ಪೊಲೀಸರು ಶೋಧ ನಡೆಸಿದರು. ಭಾರದ ವಸ್ತುವಿನಿಂದ ತಲೆಗೆ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ಅಂದಾಜಿಸಿದ್ದಾರೆ.
20 ವರ್ಷಗಳಿಂದ ಹೈದರಾಬಾದಿನ ಕಚೇರಿಯಲ್ಲಿ ಸುರೇಶ್ ಕೆಲಸ ಮಾಡುತ್ತಿದ್ದಾರೆ. 2005ರಲ್ಲಿ ವರ್ಗಾವಣೆ ಕೇಳಿ ಪತ್ನಿ ಚೆನ್ನೈಗೆ ಹೋಗಿದ್ದರು. ಫ್ಲಾಟ್ನೊಳಗೆ ಯಾರಾದರೂ ಬಂದಿದ್ದಾರೆ ಎಂದು ಪತ್ತೆ ಹಚ್ಚುವ ಶ್ರಮಕ್ಕೆ ಪೊಲೀಸರು ತೊಡಗಿದ್ದಾರೆ. ಫ್ಲಾಟಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆಗೊಳಿಸುತ್ತಿದ್ದಾರೆ.












