ಮಂಗಳೂರು: ಜನನಿಬಿಡ ಪ್ರದೇಶವಾದ ಬಂದರ್ ನ ಮುಖ್ಯ ರಸ್ತೆಯಾದ ಮುಹಮ್ಮದಾಲಿ ರಸ್ತೆಯಲ್ಲಿ ಮಳೆ ನೀರಿನಿಂದಾಗಿರಸ್ತೆಯನ್ನು ಹುಡುಕುವ ಸ್ಥಿತಿ ಉಂಟಾಗಿದ್ದು ವಾಹನ ಚಾಲಕರು ಮತ್ತು ದಾರಿಹೋಕರು ನಿತ್ಯ ಸಂಕಟ ಎದುರಿಸುವಂತಾಗಿತ್ತು. ಆಳದ ಗುಂಡಿಗಳು ನಿರ್ಮಾಣವಾಗಿ ಉಪಯೋಗಕ್ಕೆ ಬಾರದ ರೀತಿಯಲ್ಲಿ ಕೆಟ್ಟು ಹೋಗಿತ್ತು.
ಪ್ರತಿನಿತ್ಯ ನೂರಾರು ವಾಹನಗಳು ಮತ್ತು ಸಾವಿರಾರು ಜನರು ಬಳಸುವ ರಸ್ತೆಯ ದಯನೀಯ ಸ್ಥಿತಿಯನ್ನು ಕಂಡು ಜಮಾಅತೆ ಇಸ್ಲಾಮೀ ಹಿಂದ್ ನ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (HRS) ಯು ವೆಲ್ಫೇರ್ ಪಾರ್ಟಿ, ಎಸ್ ಐ ಓ ಹಾಗೂ ಸ್ಥಳೀಯ ಚಾಲಕರ ಸಹಕಾರದೊಂದಿಗೆ ಇಂದು ಬೆಳಿಗ್ಗೆ ಶ್ರಮದಾನದ ಮೂಲಕ ಗುಂಡಿಗಳನ್ನು ಮುಚ್ಚಿ, ಸಾರ್ವಜನಿಕರ ಸುಗಮ ಪ್ರಯಾಣಕ್ಕೆ ಸೌಲಭ್ಯ ಕಲ್ಪಿಸಿಕೊಡಲಾಯಿತು.

















