ನೋವು ನಿವಾರಕಗಳಿಗೆ ಸಾವಿರಾರು ಜನರ ಸಾವು; ಜಾನ್ಸನ್ ಆಂಡ್ ಜಾನ್ಸನ್‍ಗೆ ಭಾರೀ ಮೊತ್ತದ ದಂಡ!

0
629

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಆ.27: ನೋವು ನಿವಾರಕಗಳ ಮಾದಕವಸ್ತುಗಳ ದಾಸರಾಗಿ ಸಾವಿರಾರು ಜನರು ಮೃತರಾಗಿರುವುದು ಪತ್ತೆಯಾದ ನಂತರ ಅಮೆರಿಕದ ಕಂಪೆನಿ ಜಾನ್ಸನ್ ಆಂಡ್ ಜಾನ್ಸನ್‍ಗೆ 57.2 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಅಮೆರಿಕ ಒಕ್ಲಾಹಾಂ ರಾಜ್ಯದ ಕ್ಲೀವ್‍ಲಾಂಡ್ ಕೌಂಟಿ ಜಿಲ್ಲಾ ನ್ಯಾಯಾಧೀಶ ತಾಡ್ ಬಲ್ಕಮಂಟೊ ತೀರ್ಪು ನೀಡಿದ್ದು 2007ರಿಂದ 2017ರವರೆಗೆ ಒಕ್ಲಹಾಂದಲ್ಲಿ 4,653 ಮಂದಿ ಸಾವನ್ನಪ್ಪಿದ್ದು, ನೋವು ನಿವಾರಕಗಳ ಹೆಚ್ಚುವರಿ ಡೋಸ್‍ನ ಕಾರಣದಿಂದ ಇದು ಸಂಭವಿಸಿದೆ ಎಂಬುದನ್ನು ಮರೆಸಿಡಲಾಗಿತ್ತು ಎಂದು ಅಟಾರ್ನಿ ಜನರಲ್ ಮೈಕ್ ಹಂಟರ್ ಕೋರ್ಟಿಗೆ ತಿಳಿಸಿದರು.

ಕಠಿಣ ನೋವು ನಿವಾರಕಗಳನ್ನು ಬಳಸುವವರು ಅದರ ದಾಸರಾಗಿ ಬಿಡುವ ಪರಿಸ್ಥಿತಿಯಿದೆಯೆಂದು ಜಡ್ಜ್ ತೀರ್ಪು ನೀಡುತ್ತಾ ಹೇಳಿದರು. ಜಾಹೀರಾತು, ಡಾಕ್ಯುಮೆಂಟರಿ ಪ್ರಭಾವದಲ್ಲಿ ಇದು ಸಾಮಾಜಿಕ ಸಮಸ್ಯೆಯಾಗಿ ಬದಲಾಯಿತು. ಮತ್ತು ಸಮಾಜವನ್ನು ಒಟ್ಟಾರೆ ನಾಶಪಡಿಸುವ ಕೆಲಸವಾಯಿತು ಎಂದು ಜಡ್ಜ್ ಹೇಲಿದರು. ತೀರ್ಪಿನ ವಿರುದ್ಧ ಒಕ್ಲಾಹಾಮ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಕಂಪೆನಿ ಅಟಾರ್ನಿ ಹೇಳಿದರು. ಸಮಾನವಾದ ಪ್ರಕರಣದಲ್ಲಿ ಎರಡು ಕಂಪೆನಿಗಳು ರಾಜಿಯಲ್ಲಿ ಪ್ರಕರಣವನ್ನು ಬಗೆಹರಿಸಿದ್ದವು.