ಜಾನ್ಸನ್ & ಜಾನ್ಸನ್ ವ್ಯಾಕ್ಸಿನ್ ಪರೀಕ್ಷೆ ಅಂತಿಮ ಹಂತದಲ್ಲಿ

0
8036

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಸೆ.24: ಜಾನ್ಸನ್ & ಜಾನ್ಸನ್ ವ್ಯಾಕ್ಸಿನ್‍ನ ಕೊನೆಯ ಹಂತದ ಪರೀಕ್ಷೆ ಆರಂಭವಾಗಿದೆ. 60,000 ಸ್ವಯಂ ಸೇವಕರಲ್ಲಿ ವ್ಯಾಕ್ಸಿನ್‍ನ ಒಂದು ಡೋಸ್ ಪರೀಕ್ಷಿಸಲಾಗುತ್ತದೆ. ಈ ವರ್ಷ ಕೊನೆಯಲ್ಲಿ ಅಥವಾ ಮುಂದಿನ ವರ್ಷ ಆರಂಭದಲ್ಲಿ ವ್ಯಾಕ್ಸಿನ್ ಪರೀಕ್ಷೆ ಪೂರ್ಣಗೊಳ್ಳಲಿದೆ ಎಂದು ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ.ಪಾಲ್ ಸ್ಟೋಫೆಲ್ಸ್ ಹೇಳಿದರು. ಅಮೆರಿಕದ ನ್ಯಾಶನಲ್ ಇನ್ಸಿಟಿಟ್ಯೂಟ್ ಆಫ್ ಹೆಲ್ತ್ ಅಧಿಕಾರಿಗಳೊಂದಿಗೆ ಕಂಪೆನಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದೆ.

ಅಮೆರಿಕ, ಬೆಲ್ಜಿಯಂನಲ್ಲಿ ಕಂಪೆನಿ ನಡೆಸಿದ ಪ್ರಥಮ, ದ್ವಿತೀಯ ಪರೀಕ್ಷೆಗಳು ಯಶಸ್ವಿಯಾಗಿದ್ದವು. ಇದರ ಪರೀಕ್ಷಾ ಫಲಿತಾಂಶವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು. ಮೊದಲು ಪ್ರಾಣಿಗಳಲ್ಲಿ ಪರೀಕ್ಷೆ ಮಾಡಲಾಗಿದ್ದು ಒಂದೇ ಒಂದು ಡೋಸ್ ಸಾಲುತ್ತದೆ ಎಂದು ಕಂಡು ಬಂದಿತ್ತು. ಇದರ ಆಧಾರದಲ್ಲಿ ಮೂರನೇ ಹಂತದ ಪರೀಕ್ಷೆಯಲ್ಲಿ ಎಲ್ಲರಿಗೂ ಒಂದು ಡೋಸ್ ಕೊಡಲಾಗುತ್ತಿದೆ. 2021ರಲ್ಲಿ ಕೊರೋನ ವ್ಯಾಕ್ಸಿನ್ ಒಂದು ಬಿಲಿಯನ್ ಡೋಸ್‍ಗಳು ನಿರ್ಮಿಸಲು ಜಾನ್ಸನ್ ಆಂಡ್ ಜಾನ್ಸನ್ ಯೋಜನೆ ಹಮ್ಮಿಕೊಂಡಿದೆ.

ಇದೇ ವೇಳೆ ಮೊಡೊನ, ಪಫಿಸರ್, ಆಸ್ಟ್ರೋ ಸೆನಿಕ ಮುಂತಾದ ಕಂಪೆನಿಗಳು ವ್ಯಾಕ್ಸಿನ್‌ನ ಎರಡೇ ಡೋಸ್‍ಗಳನ್ನು ಪರೀಕ್ಷಿಸಿದೆ.