ಜೂನ್ 23ರ ಭಾನುವಾರ ನಡೆಯಬೇಕಿದ್ದ ನೀಟ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ ದಿಢೀರ್ ಮುಂದೂಡಿಕೆ!

0
138

ಸನ್ಮಾರ್ಗ ವಾರ್ತೆ

ದೇಶದಲ್ಲಿ ಭಾರೀ ವಿವಾದ ಎಬ್ಬಿಸಿರುವ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದಿಂದಾಗಿ ಜೂನ್ 25ರಿಂದ 27ರ ನಡುವೆ ನಿಗದಿಪಡಿಸಿದ್ದ 2024ನೇ ಸಿಎಸ್‌ಐಆರ್ ಯುಜಿಸಿ ಎನ್‌ಇಟಿ ಪರೀಕ್ಷೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮುಂದೂಡಿದ ಬೆನ್ನಲ್ಲೇ, ಜೂನ್ 23ರ ಭಾನುವಾರದಂದು ನಡೆಯಬೇಕಿದ್ದ ನೀಟ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯನ್ನು ದಿಢೀರ್ ಆಗಿ ಮುಂದೂಡಲಾಗಿದೆ.

https://x.com/RishikaSadam/status/1804553836528603513?t=agZfkElYo_mNonCVuLC5ew&s=19

ಈ ಬಗ್ಗೆ ಶನಿವಾರ ತಡರಾತ್ರಿ ಪ್ರಕಟಣೆ ಹೊರಡಿಸಿರುವ ಕೇಂದ್ರ ಆರೋಗ್ಯ ಇಲಾಖೆಯು, “ಇತ್ತೀಚಿನ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯಿಂದಾಗಿ ನಾಳೆ(ಜೂನ್ 23ರ ಭಾನುವಾರ) ನಡೆಯಬೇಕಿದ್ದ ನೀಟ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯನ್ನು ಮುಂದೂಡಿದ್ದೇವೆ. ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸಲಿದ್ದೇವೆ” ಎಂದು ತಿಳಿಸಿದೆ.

ಈ ಎಲ್ಲ ಬೆಳವಣಿಗೆಯ ನಡುವೆಯೇ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಮುಖ್ಯಸ್ಥನನ್ನೂ ಕೂಡ ಕೇಂದ್ರ ಸರ್ಕಾರ ಬದಲಿಸಿದೆ.

https://x.com/PTI_News/status/1804545388772209105?t=cx74Yl23_87WodaYOEqasg&s=19

NEET-NET ಪರೀಕ್ಷೆಯ ವಿವಾದದ ನಡುವೆಯೇ NTA ಮುಖ್ಯಸ್ಥನ ಸ್ಥಾನದಿಂದ ಸುಬೋಧ್ ಕುಮಾರ್ ಅವರನ್ನು ತೆಗೆದುಹಾಕಿದ್ದು, ಅವರ ಸ್ಥಾನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ನೇಮಿಸಲಾಗಿದೆ.

https://x.com/nabilajamal_/status/1804553739610808419?t=yuD-YGny-MpmYCEXxbyXuw&s=19