ಕಾಬಾದ ಸೇವೆಯನ್ನು ಮುಂದುವರಿಸಿದ ಅಲ್ ಶೈಬಿ ಕುಟುಂಬ; ಕೀಲಿಕೈ ಇವರ ಕೈವಶವಾಗಲು ಕಾರಣವೇನು? ಹಿನ್ನಲೆ ತಿಳಿಯೋಣ…

0
387

ಸನ್ಮಾರ್ಗ ವಾರ್ತೆ

ಕಅಬಾದ ಬೀಗದ ಕೀಯನ್ನು ಹೊಸ ಪರಿಚಾರಕರಿಗೆ ಹಸ್ತಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಾದಲ್ಲಿ ಕಾರ್ಯಕ್ರಮ ಕೂಡ ನಡೆದಿದೆ. ಕಅಬಾದ ಪರಿಚಾರಕರಾಗಿದ್ದ ಡಾಕ್ಟರ್ ಸಾಲಿಹ್ ಅಲ್ ಶೈಬಿ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ನಂತರದವರಾದ ಶೈಖ್ ಅಬ್ದುಲ್ ವಹಾಬ್ ಬಿನ್ ಜೈನುಲ್ ಆಬಿದೀನ್ ಅಲ್ ಶೈಬಿ ಅವರಿಗೆ ಕಅಬಾದ ಬೀಗದ ಕೀಯನ್ನು ಹಸ್ತಾಂತರಿಸಲಾಗಿದೆ

35cm ಉದ್ದದ ಈ ಬೀಗದ ಕಿಯನ್ನು ಕಬ್ಬಿಣದಿಂದ ತಯಾರಿಸಲಾಗಿದೆ. ಕಅಬಾ ಪರಿಚಾರಕರಾದ ವ್ಯಕ್ತಿ ಮಾತ್ರ ಇದನ್ನು ಕೈ ವಶ ಇಟ್ಟುಕೊಳ್ಳಬಹುದಾಗಿದೆ. ಹಾಗೆಯೇ,, ಕಿಸ್ವ ಬಟ್ಟೆಯನ್ನು ಬದಲಿಸುವುದು ಕಅಬಾವನ್ನು ತೊಳೆಯುವುದು ಸುಗಂಧವನ್ನು ಪೂಸುವುದು ಕಅಬಾದ ಬಾಗಿಲು ತೆರೆಯುವುದು ಮತ್ತು ಮುಚ್ಚುವುದು ಮುಂತಾದ ಎಲ್ಲಾ ಕೆಲಸಗಳ ಹೊಣೆಗಾರಿಕೆಯೂ ಕಅಬಾದ ಈ ಪರಿಚಾರಕರ ಮೇಲಿದೆ.

ಅತ್ಯಂತ ಗೌರವಾನ್ವಿತ ಮತ್ತು ಅತ್ಯಂತ ಶ್ರೇಷ್ಠ ಕೆಲಸವಾಗಿ ಈ ಪರಿಚಾರಕ ವೃತ್ತಿಯನ್ನು ಗೌರವಿಸಲಾಗುತ್ತದೆ. ಪ್ರವಾದಿಯವರು ಮಕ್ಕ ವಿಜಯದ ಬಳಿಕ ಕಅಬಾದ ಬೀಗದ ಕೈಯನ್ನ ಅಲ್ ಶೈಬಿ ಕುಟುಂಬಕ್ಕೆ ಒಪ್ಪಿಸಿದ್ದರು.. ಅಂದಿನಿಂದ ಇಂದಿನವರೆಗೆ ಅಲ್ ಶೈಬಿ ಕುಟುಂಬವೇ ಕಅಬಾದ ಪರಿಚಾರಿಕೆಯನ್ನು ನಡೆಸುತ್ತಾ ಬಂದಿದೆ.