ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಪೆರರಿವಾಳನ್‍ರನ್ನು ಇನ್ನಾದರೂ ಬಿಟ್ಟು ಬಿಡಿ- ಕಮಲ್ ಹಾಸನ್

0
644

ಸನ್ಮಾರ್ಗ ವಾರ್ತೆ

ಚೆನ್ನೈ,ನ. 24: ರಾಜೀವ್ ಗಾಂಧಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪೆರರಿವಾಳನ್‍ನ್ನು ಬಿಡುಗಡೆಗೊಳಿಸಬೇಕೆಂದು ನಟ ಕಮಲ್ ಹಾಸನ್ ಹೇಳಿದ್ದಾರೆ. 30 ವರ್ಷಗಳಿಂದ ಅವರು ಜೈಲಿನಲ್ಲಿದ್ದಾರೆ. ಅವರಿಗೆ ತಡವಾಗಿ ಸಿಗುವ ನ್ಯಾಯವಾದರೂ ಸಿಗಬೇಕೆಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ. ಸರಿಯಾದ ರೀತಿಯಲ್ಲಿ ವಿಚಾರಣೆ ಕೂಡ ನಡೆದಿಲ್ಲ. ಸಂದೇಹಗಳು ಉಳಿದುಕೊಂಡಿವೆ. ಮೂವತ್ತು ವರ್ಷ ಆಗಿಯೂ ಪೆರರಿವಾಳನ್‍ರ ಜೈಲು ವಾಸ ಮುಂದುವರಿಯುತ್ತಿದೆ. ಕೋರ್ಟುಗಳು ಖುಲಾಸೆ ಮಾಡಿದರೂ ರಾಜ್ಯಪಾಲರ ಸಹಿಗಾಗಿ ಕಾಯಲಾಗುತ್ತಿದೆ. ವಿಳಂಬ ನ್ಯಾಯವನ್ನಾದರೂ ಕೊಡಿ ಎಂದು ಕಮಲ್ ಮನವಿ ಮಾಡಿದ್ದಾರೆ.

ಪೆರರಿವಾಳನ್ ವಿಚಾರಣೆ ಸರಿಯಾದ ರೀತಿಯಲ್ಲಿ ನಡೆದಿದೆಯೇ ಎಂಬ ವಿಷಯದಲ್ಲಿ ಕಮಲ್ ಹಾಸನ್ ಸಂದೇಹ ಪ್ರಕಟಿಸಿದ್ದಾರೆ. ಪೆರರಿವಾಳನ್ ಬಿಡುಗಡೆಗಾಗಿ ತಮಿಳು ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ನಟ ವಿಜಯ್ ಸೇತುಪತಿ ಮುಂತಾದ ಸಿನೆಮಾ ಕ್ಷೇತ್ರದ ಹಲವರು ಈಗಾಗಲೇ ಆಗ್ರಹಿಸಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 30 ವರ್ಷಗಳಿಂದ ಜೈಲಲ್ಲಿರುವ ಪೆರರಿವಾಳನ್‍ರ ಪರೋಲ್ ಸಮಯವನ್ನು ಒಂದು ವಾರ ಹೆಚ್ಚಿಸಬೇಕೆಂದು ಸುಪ್ರೀಂ ಕೋರ್ಟು ಕಳೆದ ದಿವಸ ಆದೇಶಸಿತ್ತು. ಆಸ್ಪತ್ರೆಗೆ ಹೋಗಲು ಅಗತ್ಯವಾದ ಸುರಕ್ಷಾ ಸೌಕರ್ಯಗಳನ್ನು ಪೆರರಿವಾಳನ್‌ಗೆ ಒದಗಿಸಬೇಕೆಂದು ತಮಿಳ್ನಾಡು ಸರಕಾರಕ್ಕೆ ಸುಪ್ರೀಂ ಕೋರ್ಟು ನಿರ್ದೇಶಿಸಿತ್ತು. ಹಲವಾರು ಮಂದಿ ಪೆರರಿವಾಳನ್ ಬಿಡುಗಡೆಗೆ ಆಗ್ರಹಿಸಿದ್ದು 26 ವರ್ಷದ ಬಳಿಕ ಮೊದಲ ಬಾರಿ ಪೆರರಿವಾಳನ್‍ಗೆ ಪರೋಲ್ ಲಭಿಸಿದೆ.