ಸನ್ಮಾರ್ಗ ವಾರ್ತೆ
ಗೋವಾದಲ್ಲಿ ವಾಸ್ಕೋದ ರವೀಂದ್ರ ಭವನದಲ್ಲಿ ಇಂದು ಬೆಳಿಗ್ಗೆ ಜರುಗಿದ 2026 ನೇ ಸಾಲಿನ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಮ.ನಿ.ಪ್ರ. ಪ್ರಭುದೇವ ಮಹಾಸ್ವಾಮಿಗಳುಲಿಂಗಾಯತ ಮಹಾಮಠ ಬಸವಗಿರಿ ಬೀದರ್ ರವರು ಸಾಹಿತಿ ನವೀದ್ ಮುಲ್ಲಾ ಅವರಿಗೆ ರಾಷ್ಟ್ರೀಯ ಸಾಹಿತ್ಯ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಉಡುಪಿಯ ಖ್ಯಾತ ಜ್ಯೋತಿಷ್ಯ ಶ್ರೀ ಕೃಷ್ಣ ಗುರೂಜಿ, ಕೊಪ್ಪಳ ಬೇವಿನ ಹಳ್ಳಿಯ ಸಾಹಿತಿ ಹಾಗೂ ಕಲಾವಿದ ಶ್ರೀ ಡಾ.ಸುರೇಂದ್ರ ಸ್ವಾಮಿ, ಪ್ರತಿಫಲ ಫೌಂಡೇಶನ್ ಅಧ್ಯಕ್ಷೆ ಪೂಜಾ ಬಡಿಗೇರ, ಚಿರಾಯು ಕನ್ನಡ ವಾಹಿನಿಯ ಮುಖ್ಯಸ್ಥ ಡಾ. ಮಂಜುನಾಥ ಶಿವಕ್ಕನವರ ಸೇರಿದಂತೆ ಅನೇಕ ಸಾಧಕರು, ಕಲಾವಿದರು, ಸಾಹಿತಿಗಳು,ಲೇಖಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.












