ಜೈಲಿಗಟ್ಟಿದರೂ ನಿಮ್ಮನ್ನು ವಿರೋಧಿಸುವೆ- ಅಮಿತ್‍ಶಾಗೆ ಹೇಳಿದ ಕಪಿಲ್ ಸಿಬಲ್

0
896

ಹೊಸದಿಲ್ಲಿ, ಆ. 2: ಗೃಹ ಸಚಿವರೇ, ನಾವು ಮೌನವಾಗಿರುತ್ತೇವೆ ಎಂದು ನೀವು ಭಾವಿಸುವುದು ಬೇಡ. ನಿಮ್ಮ ಬಳಿ ಬಹುಮತ ಇರಬಹುದು. ಆದರೆ, ಇಂತಹ ಕಾನೂನು ನಿರ್ಮಿಸಿದರೆ ಕೊನೆಯವರೆಗೆ ಎದ್ದು ನಿಂತು ಅದನ್ನು ವಿರೋಧಿಸುತ್ತೇವೆ” ಎಂದು ಲೋಕಸಭೆಯಲ್ಲಿ ಪಾಸು ಮಾಡಿದ ವಿವಾದ ಯೆಪಿಎ ಮಸೂದೆಯ ಚರ್ಚೆಯ ವೇಳೆ ಗೃಹ ಸಚಿವ ಅಮಿತ್ ಶಾರಿಗೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದರು.

ಸಿಬಿಐ, ಎಂಫೋರ್ಸ್‍ಮೆಂಟ್ ಅನ್ನು ನಮ್ಮ ಬೆನ್ನಿಗೆ ಬಿಟ್ಟರೂ ಆದಾಯ ತೆರಿಗೆ ಹಾಕಿದರೂ ಇನ್ನು ಜೈಲಿಗಟ್ಟಿದರೂ ನಿಮ್ಮನ್ನು ವಿರೋಧಿಸುತ್ತೇವೆ ಎಂದು ಕಪಿಲ್ ಸಿಬಲ್ ಶಾರಿಗೆ ಹೇಳಿದರು. ವ್ಯಕ್ತಿಗಳನ್ನು ಬೆನ್ನಟ್ಟಲು ಏಜೆನ್ಸಿಗಳನ್ನು ಬಿಟ್ಟು ಕಾನೂನು ದುರುಪಯೋಗ ಮಾಡುವುದನ್ನು ಕಳೆದ ಕೆಲವು ದಿವಸಗಳಲ್ಲಿ ನಾವು ನೋಡುತ್ತಿದ್ದೇವೆ. ಹಾಫಿಝ್ ಸಈದ್ ಭಯೋತ್ಪಾದಕನಾಗಿದ್ದಾನೆ. ಗೋಡ್ಸೆಯೂ ಭಯೋತ್ಪಾದಕನೇ. ಆದರೆ ಗೋಡ್ಸೆ ಭಯೋತ್ಪಾದಕ ಎನ್ನುವ ಧೈರ್ಯ ನಿಮಗಿಲ್ಲ ಎಂದು ಕಪಿಲ್ ಸಿಬಲ್ ಸವಾಲೆಸೆದರು.

ಗೃಹಸಚಿವರು ಎದ್ದು ನಿಂತು ಹಾಗೆ ಹೇಳಬೇಕು. ನಿಮ್ಮ ವಿರುದ್ಧ ಯಾರಾದರೂ ಮಾತಾಡಿದರೆ ಅವರು ಭಯೋತ್ಪಾದಕರಾಗುತ್ತಾರೆ. ಜೆಎನ್‍ಯುನಲ್ಲಿ ಏನಾದರೂ ಹೇಳಿದರೆ, ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಯಾವುದೇ ದಲಿತರು ಏನಾದರೂ ಮಾಡಿದರೆ ಅವರನ್ನೂ ಭಯೋತ್ಪಾದಕರನ್ನಾಗಿಸುತ್ತೀರಿ. ಭೀಮಾ ಕೊರೆಗಾಂವ್‍ನಲ್ಲಿ ಕಾರ್ಯಕ್ರಮ ನಡೆಸಿದವರನ್ನು ಭಯೋತ್ಪಾದಕರನ್ನಾಗಿ ಮಾಡಿದ್ದೀರಿ. ಒಬ್ಬನನ್ನು ಭಯೋತ್ಪಾದಕ ಎಂದು ನೀವು ಯಾವ ಆಧಾರದಲ್ಲಿ ಹೇಳುತ್ತಿದ್ದೀರಿ ಎಂದು ಹೇಳಬೇಕು. ಸದನದಲ್ಲಿ ಅದನ್ನು ನೀವು ಹೇಳಲೇಬೇಕು ಎಂದು ಕಪಿಲ್ ಸಿಬಲ್ ಗುಡುಗಿದರು.

ಮೋದಿ ಸರಕಾರ ಅರ್ಬನ್ ನಕ್ಸಲಿಸಂ ಎಂದು ಒಬ್ಬರನ್ನು ಭಯೋತ್ಪಾದಕನಾಗಿ ಘೋಷಿಸಿದರೆ ಅವರಿಗೆ ಏನು ಸಂಭವಿಸಬಹುದು ಎಂದು ಸಿಬಲ್ ಪ್ರಶ್ನಿಸಿದರು. ಸಮಾಜದಲ್ಲಿ ಆತ ಒಂಟಿಯಾದಾನು. ದೇಶದ ಕಣ್ಣಿನಲ್ಲಿ ಅವನೊಬ್ಬ ಭಯೋತ್ಪಾದಕನಾಗುವನು. ಯಥಾರ್ಥದಲ್ಲಿ ಇಂತಹ ಪ್ರಕರಣಗಳ ಇತಿಹಾಸ ಏನು? ಉದ್ಯಮಿಗಳು, ಸಮಾಜವಾದಿಗಳು, ಸಾಮಾಜಿಕ ಕಾರ್ಯಕರ್ತರೊಡನೆ ಹೀಗೆ ಮಾಡಲಾಗಿದೆ ಎಂದು ಸಿಬಲ್ ಆರೋಪಿಸಿದರು.