ಜಾಮಿಅ ಗುಂಡು ಹಾರಾಟ ಸಹಜ ಪ್ರತಿಕ್ರಿಯೆ ಎಂದ ರಾಜ್ಯ ಬಿಜೆಪಿ- ವಿವಾದವಾದಾಗ ಟ್ವೀಟ್‍ನಲ್ಲಿ ತಿದ್ದುಪಡಿ

0
1402

ಸನ್ಮಾರ್ಗ ವಾರ್ತೆ

ಬೆಂಗಳೂರು, ಫೆ.1: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಹೋರಾಟ ನಿರತ ಜಾಮಿಅ ಮಿಲ್ಲಿಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಾಟ ನಡೆದಿದ್ದು ಸಹಜ ಪ್ರತಿಕ್ರಿಯೆ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿತ್ತು. ಇದು ವಿವಾದ ಆದ ನಂತರ ಅದನ್ನು ತಿದ್ದುಪಡಿ ಮಾಡಿದೆ.

ಜೆಎನ್‍ಯು ವಿದ್ಯಾರ್ಥಿ ಶರ್ಜಿಲ್ ಇಮಾಮ್ ಹೆಸರಿನಲ್ಲಿ ದೇಶದ್ರೋಹ ಕೇಸು ಹಾಕಿದ್ದನ್ನು ಬೆಟ್ಟುಮಾಡಿ ಆತನ ಫೋಟೊಕ್ಕೆ ಆಕ್ಷನ್ ಎಂದು ಶರ್ಜಿಲ್‍ನನ್ನು ಗುಂಡು ಹಾರಿಸಿ ರಾಂ ಭಕ್ತ್ ಗೋಪಾಲನ ಚಿತ್ರಕ್ಕೆ ರಿಯಾಕ್ಷನ್ ಎಂದು ಬರೆದ ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟರ್ ಪುಟ ಶುಕ್ರವಾರ ಸಂಜೆ ಪ್ರತ್ಯಕ್ಷವಾಗಿತ್ತು. ರಾಮಭಕ್ತ್ ಗೋಪಾಲ್‍ನ ಈ ದುಷ್ಕøತ್ಯವನ್ನು ಸಮರ್ಥಿಸುವ ಪೋಸ್ಟ್ ತೀವ್ರ ಟೀಕೆಗೊಳಗಾಗಿತ್ತು. ನಂತರ ಪೋಸ್ಟ್ ನಲ್ಲಿ ಬದಲಾವಣೆ ಮಾಡಿ ಶರ್ಜಿಲ್ ಇಮಾಮ್‍ನ ಪೋಸ್ಟ್ ಗೆ ಆಕ್ಷನ್ ಬೈ ಗವರ್‍ನ್‍ಮೆಂಟ್ ಎಂದು ಮತ್ತು ರಾಂಭಕ್ತ್ ಗೊಪಾಲನ ಚಿತ್ರಕ್ಕೆ ರಿಯಾಕ್ಷನ್ ಬೈ ಆಂಟಿ ನ್ಯಾಶನಲ್ಸ್ ಎಂದು ತಲೆಬರಹ ಕೊಟ್ಟು ತಿದ್ದುಪಡಿ ಮಾಡಿದೆ.