ವಿಶೇಷ ಸ್ಥಾನಮಾನದ ರದ್ದಿನ ಬಗ್ಗೆ ವದಂತಿ; ಅತಂಕದಲ್ಲಿ ಕಾಶ್ಮೀರ; ಹಸ್ತಕ್ಷೇಪ ಇಲ್ಲವೆಂದು ಮೋದಿ ಭರವಸೆ ನೀಡಿದ್ದಾರೆ- ಉಮರ್ ಅಬ್ದುಲ್ಲ

0
490

ಶ್

ರೀನಗರ, ಆ. 3: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ ಕುರಿತು ಕೇಂದ್ರದಿಂದ ಪ್ರಮುಖ ತೀರ್ಮಾನಗಳು ಬರಲಿವೆ ಎಂಬ ವರದಿ ಪ್ರಕಟವಾಗಿರುವ ನಂತರ ಕಾಶ್ಮೀರ ಪ್ರಕ್ಷುಬ್ಧವಾಗಿದೆ. ಜನರು ಶಾಂತಿಯನ್ನು ಕಾಪಾಡಬೇಕೆಂದು ರಾಜ್ಯಪಾಲರು ಆಗ್ರಹಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊಟ್ಟಿರುವ ಸಂವಿಧಾನದ 35ನೇ ವಿಧಿಯನ್ನು ತೆಗೆದು ಹಾಕುವುದಿಲ್ಲ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ತಿಳಿಸಿದರು. ಕಾಶ್ಮೀರಕ್ಕೆ 38,000 ಸೈನಿಕರನ್ನು ಕಳುಹಿಸಲು ಕೇಂದ್ರ ಸರಕಾರ ಈಗಾಗಲೇ ತೀರ್ಮಾನಿಸಿದೆ.

ಅಮರನಾಥ ಯಾತ್ರಿಕರಿಗೆ ಮತ್ತು ಪ್ರವಾಸಿಗಳಿಗೆ ನೀಡಲಾಗಿರುವ ಸೂಚನೆ ಕೂಡ ಜನರಲ್ಲಿ ಆತಂಕ ಸೃಷ್ಟಿಗೆ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದರು. ಅನಗತ್ಯ ವದಂತಿಗಳಿಗೆ ಕಿವಿಗೊಡಬೇಡಿ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ರಾಜಕೀಯ ನಾಯರು ತಮ್ಮ ಪಾರ್ಟಿ ಕಾರ್ಯಕರ್ತರಲ್ಲಿ ಶಾಂತಿ ಪಾಲಿಸಲು ಆಗ್ರಹಿಸಬೇಕೆಂದು ರಾಜ್ಯಪಾಲರು ಮನವಿ ಮಾಡಿದರು. ಆರ್ಟಿಕಲ್ 35ಎ ರದ್ದುಪಡಿಸುವ ಯೋಜನೆ ಇಲ್ಲ ಎಂದು ರಾಜ್ಯಪಾಲರು ಹೇಳಿದರು.