ಪುಸ್ತಕಾಲಯಕ್ಕೆ ದಾಳಿ ಮಾಡಿ ಇಸ್ಲಾಮೀ ಪುಸ್ತಕಗಳನ್ನು ವಶಪಡಿಸಿಕೊಂಡ ಕಾಶ್ಮೀರಿ ಪೊಲೀಸರು

0
357

ಸನ್ಮಾರ್ಗ ವಾರ್ತೆ

ಕಾಶ್ಮೀರದ ಪೊಲೀಸರು ಪುಸ್ತಕಾಲಯಕ್ಕೆ ದಾಳಿ ಮಾಡಿ ಸುಮಾರು 668 ಪುಸ್ತಕ ಪುಸ್ತಕಗಳನ್ನ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮುಖ್ಯವಾಗಿ ದೆಹಲಿ ಮೂಲದ ಮರ್ಕಝೀ ಮಕ್ತಬ ಇಸ್ಲಾಮಿಯ ಪ್ರಕಟಿಸಿರುವ ಪುಸ್ತಕಗಳನ್ನೇ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ . ಗುಪ್ತಚರ ಇಲಾಖೆಯ ಮಾಹಿತಿಯಂತೆ ತಾವು ಈ ದಾಳಿ ನಡೆಸಿದ್ದೇವೆ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.

ವಶಪಡಿಸಿಕೊಳ್ಳಲಾದ ಹೆಚ್ಚಿನ ಪುಸ್ತಕಗಳು ಮೌಲಾನ ಮೌದೂದಿ ಅವರಿಗೆ ಸೇರಿದ್ದಾಗಿದೆ ಎಂದು ಎಪಿ ನ್ಯೂಸ್ ವರದಿ ಮಾಡಿದೆ.

ಶ್ರೀನಗರದಲ್ಲಿ ಪೊಲೀಸರು ಈ ದಾಳಿ ನಡೆಸಿದ್ದಾರೆ. ಈ ಕುರಿತಂತೆ ಪೊಲೀಸರು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಿಷೇಧಿತ ಸಂಘಟನೆಯ ವಿಚಾರಧಾರೆಯನ್ನು ಪ್ರಚಾರ ಮಾಡಲಾಗುತ್ತಿರುವುದಕ್ಕಾಗಿ ನಾವು ಈ ದಾಳಿಯನ್ನು ನಡೆಸಿದ್ದೇವೆ ಎಂಬ ಅರ್ಥ ಬರುವ ರೀತಿಯಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಶ್ಮೀರದ ಜಮಾಅತೆ ಇಸ್ಲಾಮಿಯನ್ನು 2019ರಲ್ಲಿ ನಿಷೇಧಿಸಲಾಗಿದೆ. ಜಮಾಅತೆ ಇಸ್ಲಾಮಿ ಕಾಶ್ಮೀರವು ಪ್ರತ್ಯೇಕ ಘಟಕವಾಗಿದ್ದು ಅದಕ್ಕೂ ಜಮಾಅತೆ ಇಸ್ಲಾಮಿ ಹಿಂದ್ ಗೂ ಸಂಬಂಧವಿಲ್ಲ ಅನ್ನುವುದನ್ನು ಈ ಮೊದಲೇ ತಿಳಿಸಲಾಗಿದೆ.